ಕುಶಾಲನಗರ, ಜು 12: ಹಾರಂಗಿಯ ಹುಲುಗುಂದ ಗ್ರಾಮದ ಕ್ರೀಡಾಂಗಣಕ್ಕೆ ದಿವಂಗತ ಯೋಧ ಕೆ. ರಾಘವೇಂದ್ರ ಹೆಸರು ನಾಮಕರಣಗೊಳಿಸಿ ಶಾಸಕ ಡಾ.ಮಂತರ್ ಗೌಡ ಹಾಗೂ ಸಿಐಎಸ್ಎಫ್ ಡಿಐಜಿ ನೆಲ್ಲೂರು ಪೆರುಮಾಳ್ ಉದ್ಘಾಟಿಸಿದರು.
ಕ್ರೀಡಾಂಗಣ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ರೂ.15 ಲಕ್ಷ ಅನುದಾನ ಒದಗಿಸುವುದಾಗಿ ಶಾಸಕರು ಭರವಸೆ ನೀಡಿದರು.
ಹೋರಾಟಗಾರ ಕುಟುಂಬದಿಂದ ಬಂದ
ರಾಘವೇಂದ್ರ ಅವರ ದೇಶಸೇವೆ ಶ್ಲಾಘನೀಯ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು.ಇದು ಇತರೆ ಯುವ ಜನರಿಗೆ ಸ್ಪೂರ್ತಿ ಯಾಗಬೇಕು.
ರಾಘವೇಂದ್ರ ಹೆಸರನ್ನು ಮೈದಾನಕ್ಕೆ ನಾಮಕರಣ ಮಾಡಿರುವಉದು ಶ್ಲಾಘನೀಯ ಕಾರ್ಯ ಎಂದರು.
ಹಾರಂಗಿ ಬಸ್ ನಿಲ್ದಾಣಕ್ಕೆ ವೀರ ರಾಘವೇಂದ್ರ ಹೆಸರಿಡಲು ಶಾಸಕ ಮಂತರ್ ಗೌಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಮೈದಾನ ಅಭಿವೃದ್ಧಿ ಹಾಗೂ ಗ್ಯಾಲರಿ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ತಿಳಿಸಿದ ಅವರು, ಮೈದಾನ ಅಂಚಿನಲ್ಲಿ ಗಿಡನೆಡಲು ಸೂಚಿಸಿದರು.
ಈ ಸಂದರ್ಭ ಸಿಐಎಸ್ಎಫ್
ಅಸ್ಟಿಡೆಂಟ್ ಕಮಾಂಡರ್ ಯೋಗೇಶ್ ಚಂದ್ರಮಿಶ್ರ ಸೇರಿದಂತೆ ಕಾಂಗ್ರೆಸ್ ಮುಖಂಡರು, ದಿ.ಯೋಧನ ಕುಟುಂಬಸ್ಥರು, ಗ್ರಾಮಸ್ಥರು, ಅಧಿಕಾರಿಗಳು ಇದ್ದರು.
Back to top button
error: Content is protected !!