ಕುಶಾಲನಗರ.ಸೆ. 1: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊಂಡಿರುವ ಕೂಡಿಗೆ ಡೇರಿಗೆ ಹಾಸನ ಹಾಲು ಒಕ್ಕೂಟದ ವತಿಯಿಂದ ರೂ 20 ಕೋಟಿ ಹಣವನ್ನು ವಿನಿಯೋಗಿಸುವ ಕ್ರಿಯಾ ಯೋಜನೆಯ ಸಿದ್ದತೆಯು ಈಗಾಗಲೇ ಒಕ್ಕೂಟದ ವತಿಯಿಂದ ನಡೆದಿದೆ ಎಂದು ಹಾಸನ ಹಾಲು ಒಕ್ಕೂಟದ ಅಧ್ಯಕ್ಷರು, ಲೋಕೋಪಯೋಗಿ ಇಲಾಖೆ ಮಾಜಿ ಸಚಿವರು ಆದ ಹೆಚ್. ಡಿ. ರೇವಣ್ಣ ಒಕ್ಕೂಟದ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ತಿಳಿಸಿದರು.
ಕೂಡಿಗೆ ಡೈರಿಯ ಹಳೆಯ ಕಟ್ಟಡಗಳನ್ನು ಕೆಡವಿ ಮುಂದಿನ ದಿನಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮುಖೇನ ನೂತನ ಕಟ್ಟಡ ನಿರ್ಮಾಣ ಮಾಡವ ಮೂಲಕ ಡೈರಿಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಪರವಾಗಿ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್ ನವರು ಹೆಚ್. ಡಿ. ರೇವಣ್ಣನರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಮಹೇಶ್, ಸೇರಿದಂತೆ ಒಕ್ಕೂಟದ ನಿರ್ದೇಶರು ಹಾಜರಿದ್ದರು.
Back to top button
error: Content is protected !!