ಕುಶಾಲನಗರ, ಅ 02 ಜಿಲ್ಲಾಧಿಕಾರಿಗಳ ಅದೇಶದಂತೆ ಭಾರತ ಸರ್ಕಾರದ ಚುನಾವಣಾ ಆಯೋಗ ನಿರ್ದೇಶನದಂತೆ ಇದೇ ಮೊದಲ ಬಾರಿಗೆ ಕುಶಾಲನಗರ ತಾಲ್ಲೂಕಿನ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ದಾಖಲೆಯಲ್ಲಿರುವ ಪ್ರಸ್ತುತ ಪ್ರಾಯ 101 ವರ್ಷದ ಕಾಳಮ್ಮ ಮತ್ತು ಸುಂಟಿಕೊಪ್ಪ ಹೋಬಳಿ ಕೊಡಗರಹಳ್ಳಿ ಗ್ರಾಮದ 101 ವರ್ಷದ ನಂಜಮ್ಮ ಎಂಬವರುಗಳನ್ನು ಕಂದಾಯ ಇಲಾಖೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ ಪ್ರಕಾಶ್, ಕಂದಾಯ ಪರಿವೀಕ್ಷಕ ಸಂತೋಷ್, ಸುಂಟಿಕೊಪ್ಪ ಉಪ ತಹಶೀಲ್ದಾರ ಶಿವಪ್ಪ, ಪರಿವೀಕ್ಷಕ ಪ್ರಶಾಂತ್, ಸೇರಿದಂತೆ ಆಯಾ ಭಾಗದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಬಿ ಎಲ್, ಓ, ಹಾಜರಿದ್ದರು.
Back to top button
error: Content is protected !!