ಕುಶಾಲನಗರ, ಅ 01: ಮುಳ್ಳುಸೋಗೆ ಗ್ರಾಮ ಪಂಚಾಯತಿ ವತಿಯಿಂದ ಗ್ರಾಪಂ ಕಾರ್ಯಾಲಯದ ಸಭಾಂಗಣದ ಕಟ್ಟಡದಲ್ಲಿ ಅರೋಗ್ಯ ಉಪ ಕೇಂದ್ರಕ್ಕೆ ಹೊಂದಿಕೊಂಡಂತೆ ಶಿಶು ಆರೋಗ್ಯ ಕೇಂದ್ರವನ್ನು ತೆರೆಯಲಾಗಿದೆ.
ಶಿಶು ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚೆಲುವರಾಜ್ ನೆರವೇರಿಸಿದರು. ನಂತರ ಮಾತನಾಡಿದ ಅವರು, ಮಕ್ಕಳ ತಾಯಂದಿರಿಗೆ ಅನುಕೂಲವಾಗುವಂತೆ ಗ್ರಾಮ ಪಂಚಾಯತಿ ವತಿಯಿಂದ ಈ ವ್ಯವಸ್ಥೆ ಕಲ್ಪಿಸಲಾಗಿದೆ. ಹಾಲು ಕುಡಿಯುವ ಮಕ್ಕಳನ್ನು ಎತ್ತಿಕೊಂಡು ವ್ಯಾಕ್ಸಿನೇಷನ್ ಮತ್ತಿತರ ಆರೋಗ್ಯ ತಪಾಸಣೆಗಾಗಿ ಇಲ್ಲಿಗೆ ಆಗಮಿಸುವ ತಾಯಂದಿರಿಗೆ ಸಾರ್ವಜನಿಕವಾಗು ಮಕ್ಕಳಿಗೆ ಹಾಲು ಕುಡಿಸುವುದೇ ಕೆಲವೊಮ್ಮೆ ಬಹಳಷ್ಟು ದೊಡ್ಡ ಹಿಂಸೆಯಾಗುತ್ತಿತ್ತು. ಗ್ರಾಮ ಪಂಚಾಯತಿಯು ರೂಪಿಸಿರುವ ಶಿಶು ಆರೋಗ್ಯ ಕೇಂದ್ರದಿಂದ ತಾಯಂದಿರ ಅಳುಕು ಮರೆಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಜಯಮ್ಮ, ಸರ್ವ ಸದಸ್ಯರು, ಅಭಿವೃದ್ಧಿ ಅಧಿಕಾರಿ ಸುಮೇಶ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಮಕ್ಕಳ ತಾಯಂದಿರು ಹಾಜರಿದ್ದರು.
Back to top button
error: Content is protected !!