ಕಾರ್ಯಕ್ರಮ

ಸಹಕಾರ ಸಂಘಗಳಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ: ಬಾಂಡ್ ಗಣಪತಿ

ಕುಶಾಲನಗರ, ಸೆ 21: ಸಹಕಾರ ಸಂಘಗಳ ಮೂಲಕ ಆಯಾ ಭಾಗದ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಮತ್ತು ಕೊಡಗು ಜಿಲ್ಲೆಯಲ್ಲಿರುವ ವಿವಿಧ ಉಪ ಕೇಂದ್ರದ ಸಹಕಾರ ಬ್ಯಾಂಕ್ ಗಳ ಮೂಲಕ ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಇದರ ಸದುಪಯೋಗವನ್ನು ಅಯಾ ಭಾಗದ ರೈತರು ಬಳಕೆ ಮಾಡಿಕೊಂಡು ಅರ್ಥಿಕವಾಗಿ ಮುಂದುವರೆಬೇಕೆಂದು ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ ತಿಳಿಸಿದರು.
ಅವರು ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಇ-ಸ್ಟಾಂಟ್(ಸ್ಟಾಂಪ್ ಪೇಪರ್) ನೀಡುವ ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ 21 ಜಿಲ್ಲಾ ಕೇಂದ್ರ ಬ್ಯಾಂಕ್ ನ ಶಾಖೆಗಳಿದ್ದು ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವಂತೆ ಮನೆ ಕಟ್ಟಡ ನಿರ್ಮಾಣ ಸಾಲ ಸೇರಿದಂತೆ ವಿವಿಧ ವಾಹನಗಳ ಖರೀದಿ ಸಾಲ ಸೇರಿದಂತೆ ವಿವಿಧ ಸಾಲ ಸೌಲಭ್ಯಗಳನ್ನು ನೀಡಲಾಗುವುದು ಇದರ ಬಳಕೆ ಮಾಡಿಕೊಂಡು ಮರು ಪಾವತಿ ಮಾಡುವ ಮೂಲಕ ಬ್ಯಾಂಕ್ ನ ಬೆಳವಣಿಗೆ ಸಹಕಾರಿಗಳಾಗಬೇಕೇಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ ಎಂ ಮಹಾದೇವ ವಹಿಸಿ ಇ- ಸ್ಟಾಂಪ್ ಯೋಜನೆಗಳ ಬಳಕೆ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಹೆಬ್ಬಾಲೆ ಗ್ರಾಮ ಪಂಚಾಯತಿ ಅಧ್ಯಕ್ಷ ಹೆಚ್ ,ಎಸ್, ಮಂಜುನಾಥ, ಶಿರಂಗಾಲ ಸಹಕಾರ ಸಂಘದ ಅಧ್ಯಕ್ಷ ಲೋಕೇಶ್, ತೊರೆನೂರು ಸಹಕಾರ ಸಂಘದ. ಅಧ್ಯಕ್ಷ ಕುಶಾಲಪ್ಪ, ಉಪಾಧ್ಯಕ್ಷ ಹೆಚ್ ಆರ್ ಮಣಿಕಂಠ, ನಿರ್ದೇಶಕರಾದ ಹೆಚ್ ಸಿ ಜಲೇಂದ್ರ ಹೆಚ್ ಕೆ, ಕವಿತಾ, ಹೆಚ್ ಜೆ, ಪರಮೇಶ್, ಹೆಚ್ ,ವಿ, ಸೋಮಶೇಖರ್, ಎಂ ಎಸ್, ಶಶಿಕಲಾ, ಸ್ವಾಮಿ, ಹೆಚ್ ಎನ್ ಮಹದೇವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್, ಎನ್, ಗಿರೀಶ್, ಸೇರಿದಂತೆ ಅನೇಕ ರೈತರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!