ಕಾರ್ಯಕ್ರಮ

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ

ಕುಶಾಲನಗರ, ಡಿ 27: ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರಿಗೆ ಶ್ರದ್ದಾಂಜಲಿ ಸಭೆ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾಗಿತ್ತು.

ಮನಮೋಹನ್ ಸಿಂಗ್ ಅವರ ಭಾವಚಿತ್ರಕ್ಕೆ‌ ಪುಷ್ಪಾರ್ಚನೆ ಮಾಡಿದ ಪಕ್ಷದ ಮುಖಂಡರು, ಕಾರ್ಯಕರ್ತರು ಮೌನಾಚರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಈ‌ ಸಂದರ್ಭ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್,
ನಾಡಿನ ಪ್ರಸಿದ್ದ ಆರ್ಥಿಕ ತಜ್ಞ, ಮುತ್ಸದ್ದಿ ಮನಮೋಹನ್ ಸಿಂಗ್ ಅವರು ದೇಶವನ್ನು ಅತ್ಯಂತ ಕಠಿಣ ಆರ್ಥಿಕ ಮುಗ್ಗಟ್ಟಿನ ಕಾಲಘಟ್ಟದಲ್ಲಿ ರಾಷ್ಟಕ್ಕೆ ಪ್ರಗತಿಯ ದಿಕ್ಸೂಚಿಯನ್ನು ತೋರಿದವರು.

ಅಮೇರಿಕಾ ಸೇರಿದಂತೆ ಸಮಸ್ತ ವಿಶ್ವ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿದ್ದಾಗ ಭಾರತದ ಜಿ ಡಿ ಪಿ ಯನ್ನು 9 ರಷ್ಟು ಸಾರ್ವಕಾಲಿಕ ದಾಖಲೆಗೆ ಏರಿಸಿದ ಜಾದೂಗಾರ ಎಂದು‌ ಕೊಂಡಾಡಿದರು.
ಮಿತಭಾಷಿಯಾಗಿ, ಸರಳ ಜೀವಿ ಅದ್ಭುತ ಜ್ಞಾನವಂತನಾದರೂ ನಿರ್ಗವಿಯಾಗಿ ನಿರಾಡಂಬರವಾಗಿ ಯಾವುದೇ ಹಗರಣ ಭ್ರಷ್ಟಾಚಾರ ವಿವಾದಗಳಿಗೆ ಸಿಲುಕದೆ, ರಾಷ್ಟ್ರದ ಆಡಳಿತದ ಚುಕ್ಕಾಣಿಯನ್ನು ಹಿಡಿದು ಭಾರತದ ಕೀರ್ತಿ ಪತಾಕೆ ಹಾರಿಸಿದರು.

ಅವರ ಅಡಳಿತದ ಅವಧಿಯು ಅನೇಕ ಪ್ರಥಮಗಳಿಗೆ ಸಾಕ್ಷಿಯಾಯಿತು.

ಭವಿಷ್ಯತ್ ಭಾರತದ ದೃಷ್ಟಿಯಿಂದ ಆಧಾರ್ ಕಾರ್ಡನ್ನು ಭಾರತದ ಪ್ರಜೆಗಳಿಗೆ ಪರಿಚಯಿಸ್ಸಿದ್ದೆ ನಮ್ಮ ಹೆಮ್ಮೆಯ ಸಿಂಗ್. ತನ್ನ ಸರಕಾರವನ್ನು ಅಧಿಕಾರವನ್ನು ಒತ್ತೆಯಿಟ್ಟು ಅವಿಶ್ವಾಸ ತಂದ, ಬೆದರಿಕೆಯ ನಡುವೆ ರಾಜಿಯಾಗದೇ ನಾಗರಿಕ ಅಣುಒಪ್ಪಂದವನ್ನು ಜಾರಿಗೆ ತಂದ ಫಲಶ್ರುತಿಯೇ ಈಗಿನ ಆಧುನಿಕ ಭಾರತದ ಉದಯಕ್ಕೆ ನಾಂದಿ ಹಾಡಿ ಅಧಿಕಾರಕ್ಕಿಂತ ರಾಷ್ಟ್ರ ಮೊದಲು ಎಂದು ಕೃತಿಯಲ್ಲಿ ಸಾಬೀತುಪಡಿಸಿದ ಮನಮೋಹನ್ ಸಿಂಗ್ ನಂಥ ಅಪ್ಪಟ ರಾಷ್ಟ್ರಪ್ರೇಮಿ, ಆರ್ಥಿಕ ತಜ್ಞ ಮುತ್ಸದ್ದಿ ಅಪರೂಪದ ರಾಜಕಾರಣಿ ಎಂದರು.
ಈ ಸಂದರ್ಭ‌ ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಮುಖಂಡರಾದ ಕೆ.ಪಿ.ಚಂದ್ರಕಲಾ ಮಾತನಾಡಿದರು.

ಈ ಸಂದರ್ಭ ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕುಶಾಲನಗರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ‌ಚಂದ್ರ, ಪ್ರಮುಖರಾದ‌ ನವೀನ್ ಗೌಡ, ಜಗದೀಶ್, ಅಶೋಕ್, ರಮೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!