ಕುಶಾಲನಗರ, ಸೆ 15: ಗುಡ್ಡೆಹೊಸೂರು ಪಂಚಾಯತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 275 ಕುಶಾಲನಗರ ದಿಂದ ಆನೇಕಾಡು ಅರಣ್ಯ ವ್ಯಾಪ್ತಿಯಲ್ಲಿ ರೈತರು ತಾವು ಸಾಕಿರುವ ಹಸುಗಳು ಮತ್ತು ಕರುಗಳನ್ನು ಹಾಲು ಕರೆದ ನಂತರ ಅದನ್ನು ರಸ್ತೆಗೆ ಬಿಡುತ್ತಿದ್ದು ಈ ಹಸು ಮತ್ತು ಕರುಗಳನ್ನು ಮರಳಿ ಕರೆದುಕೊಂಡು ಹೋಗದೆ ಅವುಗಳು ರಸ್ತೆಯಲ್ಲಿಯೇ ಮಲಗುತ್ತಿವೆ. ಇದರಿಂದ ಅನೇಕ ರಸ್ತೆ ಅಪಘಾತಗಳು ಆಗುತ್ತಿದ್ದು ಹಲವು ಸಾವು ನೋವುಗಳು ಸಂಭವಿಸಿವೆ. ಅದೇ ರೀತಿ ಹಸುಗಳು ಕೂಡ ಪ್ರತಿನಿತ್ಯ ಸಾಯುತ್ತಿದ್ದು ಮತ್ತೆ ಕೆಲವು ಕಳ್ಳತನವಾಗುತ್ತಿವೆ. ಹಾಗಾಗಿ ಈ ಬಗ್ಗೆ ಹಸು ಮಾಲೀಕರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಸ್ತೆಯಲ್ಲಿ ಇರುವ ಹಸುಗಳನ್ನು ಮೈಸೂರಿನಲ್ಲಿರುವ ಪಿಂಜಿರಾಪಲ್ ಗೋ ಸಂರಕ್ಷಣೆ ಕೇಂದ್ರಕ್ಕೆ ಪೋಲೀಸ್ ಇಲಾಖೆಯ ಮುಖಾಂತರ ಒಪ್ಪಿಸಲಾಗುವುದು. ಇದು ವಿಶೇಷವಾಗಿ ಗುಡ್ಡೆಹೊಸೂರು, ಹೇರೂರು ನಾಕೂರು, ಹೊಸಕೋಟೆ ರೈತರ ಗಮನಕ್ಕೆ ಎಂದು ಗುಡ್ಡೆಹೊಸೂರು ಹಿತರಕ್ಷಣಾ ಸಮಿತಿ ಪ್ರಕಟಣೆ ಹೊರಡಿಸಿದೆ.
Back to top button
error: Content is protected !!