ಕುಶಾಲನಗರ, ಅ 11:ಕೊಡಗಿನ ಮುಸ್ಲಿಂ ಸಮುದಾಯವು ಜಿಲ್ಲೆಯ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹಲವು ತಲೆಮಾರುಗಳಿಂದ ಕೊಡಗಿನಲ್ಲಿ ನೆಲೆಸಿರುವ ಈ ಸಮುದಾಯದ ಜನರು ಶಿಕ್ಷಣ ವ್ಯಾಪಾರ ಕೃಷಿ ಉದ್ಯೋಗ ಉದ್ಯಮ ಸಾರ್ವಜನಿಕ ಸೇವೆ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಮಾನಗಳಲ್ಲಿ ನ್ಯಾಯಯುತ ಮೀಸಲಾತಿ ಹಾಗೂ ಸಮರ್ಪಕ ರಾಜಕೀಯ ಪ್ರಾತಿನಿಧ್ಯವನ್ನು ಕೋರುವುದು ಯಾರ ದಯೆ ಕರುಣೆ ಅಥವಾ ಅನುಗ್ರಹಕ್ಕಾಗಿ ಮಾಡುವ ಮನವಿಯಲ್ಲ ಅದು ನಮ್ಮ ಸಂವಿಧಾನಬದ್ಧ ಹಕ್ಕಿನ ಘೋಷಣೆಯಾಗಿದೆ.
*ನಿಮ್ಮ ಭಿಕ್ಷೆ ನಮಗೆ ಬೇಡ ನಿಮ್ಮ ದಯೆ ನಮಗೆ ಬೇಡ ನಮಗೆ ಬೇಕಿರುವುದು ನಮ್ಮ ಹಕ್ಕು ಎಂಬುದು ಕೊಡಗಿನ ಮುಸ್ಲಿಂ ಸಮುದಾಯದ ನ್ಯಾಯಸಮ್ಮತ ಪ್ರಜಾಸತ್ತಾತ್ಮಕ ಮತ್ತು ಆತ್ಮಗೌರವದ ಧ್ವನಿಯಾಗಿದೆ ಜನಸಂಖ್ಯೆ ಸಾಮಾಜಿಕ ಕೊಡುಗೆ ಹಿಂದುಳಿತತೆ ರಾಜಕೀಯ ಪ್ರಾತಿನಿಧ್ಯದ ಕೊರತೆ ಹಾಗೂ ಸ್ಥಳೀಯ ವಾಸ್ತವಾಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಮಾನಗಳ ಮೀಸಲಾತಿಯನ್ನು ಪಾರದರ್ಶಕ ನ್ಯಾಯಯುತ ಮತ್ತು ಸಂವಿಧಾನಬದ್ಧ ರೀತಿಯಲ್ಲಿ ನಿಗದಿಪಡಿಸಬೇಕು*
*ರಾಜಕೀಯ ಪ್ರಾತಿನಿಧ್ಯವೆಂದರೆ ಕೇವಲ ಅಧಿಕಾರದ ಕುರ್ಚಿ ಅಥವಾ ಸ್ಥಾನಮಾನವಲ್ಲ ಅದು ಜನರ ಸಮಸ್ಯೆಗಳು ಆಶಯಗಳು ಮತ್ತು ಅಗತ್ಯಗಳನ್ನು ಆಡಳಿತದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿ ಅವುಗಳ ಪರಿಹಾರಕ್ಕಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಅವಕಾಶವಾಗಿದೆ. ರಸ್ತೆ ಕುಡಿಯುವ ನೀರು ಶಿಕ್ಷಣ ಆರೋಗ್ಯ ಉದ್ಯೋಗ ವಸತಿ ಮೂಲಸೌಕರ್ಯ ಮತ್ತು ಯುವಜನರ ಭವಿಷ್ಯಕ್ಕೆ ಸಂಬಂಧಿಸಿದ ವಿಚಾರಗಳಿಗೆ ಆದ್ಯತೆ ನೀಡುವ ಜನಪರ ಪ್ರಾಮಾಣಿಕ ಮತ್ತು ಸಮಗ್ರ ನಾಯಕತ್ವ ಕೊಡಗಿಗೆ ಅಗತ್ಯವಾಗಿದೆ.*
*ಕೊಡಗಿನ ಮುಸ್ಲಿಂ ಸಮುದಾಯದ ಪರವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳುವ ನಾಯಕರು ಪಕ್ಷಭೇದ ವೈಯಕ್ತಿಕ ಹಿತಾಸಕ್ತಿ ಮತ್ತು ಗುಂಪು ರಾಜಕಾರಣಗಳನ್ನು ಮೀರಿ ಜನಹಿತ ಸಾಮಾಜಿಕ ನ್ಯಾಯ ಮತ್ತು ಸಮಗ್ರ ಅಭಿವೃದ್ಧಿಯನ್ನು ತಮ್ಮ ರಾಜಕೀಯದ ಕೇಂದ್ರಬಿಂದುವಾಗಿಸಬೇಕು. ಯಾವುದೇ ಪಕ್ಷವಾಗಿರಲಿ ಯಾವುದೇ ಸಮುದಾಯವಾಗಿರಲಿಪ್ರಾಮಾಣಿಕವಾಗಿ ದುಡಿದು ಜನರ ವಿಶ್ವಾಸ ಗಳಿಸಿರುವ ಸಾರ್ವಜನಿಕ ಸೇವೆಯ ಬದ್ಧತೆ ಹೊಂದಿರುವ ಅರ್ಹ ವ್ಯಕ್ತಿಗಳಿಗೆ ಸೂಕ್ತ ಅವಕಾಶ ದೊರೆಯಬೇಕು.*
*ಎಂಎಲ್ಸಿ ಶಾಸಕ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಲ್ಲಿ ಕೊಡಗಿನ ಮುಸ್ಲಿಮರಿಗೆ ಅವರ ಅರ್ಹತೆ ಜನಸಂಖ್ಯಾ ಪ್ರಮಾಣ ಸಾಮಾಜಿಕ ಕೊಡುಗೆ ಮತ್ತು ಸಾರ್ವಜನಿಕ ಸೇವೆಯ ಆಧಾರದ ಮೇಲೆ ನ್ಯಾಯಯುತ ಅವಕಾಶ ಕಲ್ಪಿಸುವುದು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುತ್ತದೆ. ಸಮುದಾಯಗಳನ್ನು ಕೇವಲ ಮತಬ್ಯಾಂಕ್ಗಳಾಗಿ ನೋಡುವ ರಾಜಕೀಯ ಮನೋಭಾವದಿಂದ ದೂರ ಸರಿದು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಸಮಾನ ಪಾಲುದಾರರನ್ನಾಗಿ ಪರಿಗಣಿಸುವುದು ಇಂದಿನ ಅನಿವಾರ್ಯತೆ.*
*ಯಾವುದೇ ಸಮುದಾಯದ ಹೆಸರಿನಲ್ಲಿ ಸ್ವಾರ್ಥ ವೈಯಕ್ತಿಕ ಲಾಭ ಅಥವಾ ಅನೈತಿಕ ರಾಜಕಾರಣಕ್ಕೆ ಅವಕಾಶ ನೀಡಬಾರದು ಜನರ ನಂಬಿಕೆಯನ್ನು ಗೌರವಿಸುವುದು ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಯ ಕರ್ತವ್ಯವಾಗಿದೆ ಉತ್ತಮ ಕಾರ್ಯಗಳನ್ನು ಮುಕ್ತವಾಗಿ ಬೆಂಬಲಿಸುವುದರ ಜೊತೆಗೆ ತಪ್ಪುಗಳು ಅಥವಾ ಲೋಪಗಳು ಕಂಡುಬಂದಾಗ ಅವುಗಳನ್ನು ವಾಸ್ತವಾಂಶಗಳ ಆಧಾರದ ಮೇಲೆ ಶಾಂತಿಯುತವಾಗಿ ಪ್ರಶ್ನಿಸುವ ಆರೋಗ್ಯಕರ ರಾಜಕೀಯ ಸಂಸ್ಕೃತಿ ಬೆಳೆಬೇಕು*
*ಸಮುದಾಯದ ಒಗ್ಗಟ್ಟು ಎಂದರೆ ಯಾರನ್ನಾದರೂ ವಿರೋಧಿಸುವುದು ಅಥವಾ ಸಮಾಜದಲ್ಲಿ ವಿಭಜನೆ ಸೃಷ್ಟಿಸುವುದಲ್ಲ. ಅದು ಹಕ್ಕು ಗೌರವ ಭದ್ರತೆ ಸಮಾನತೆ ಮತ್ತು ಅಭಿವೃದ್ಧಿಗಾಗಿ ಜವಾಬ್ದಾರಿಯುತವಾಗಿ ಒಂದಾಗಿ ಧ್ವನಿ ಎತ್ತುವುದಾಗಿದೆ. ಯುವಕರು ಮಹಿಳೆಯರು ಶಿಕ್ಷಣತಜ್ಞರು ಉದ್ಯಮಿಗಳು ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರು ಪರಸ್ಪರ ಸಹಕಾರದಿಂದ ಸಮುದಾಯದ ಭವಿಷ್ಯಕ್ಕಾಗಿ ಸ್ಪಷ್ಟವಾದ ಸಮಗ್ರವಾದ ಮತ್ತು ಎಲ್ಲರನ್ನೂ ಒಳಗೊಂಡ ಕಾರ್ಯಯೋಜನೆಯನ್ನು ರೂಪಿಸಬೇಕು.*
*ಅರ್ಹ ಅಭ್ಯರ್ಥಿಗಳನ್ನು ಗುರುತಿಸಿ ಅವರ ಸಾಮರ್ಥ್ಯ ಪ್ರಾಮಾಣಿಕತೆ ಜನಸಂಪರ್ಕ ಸಾಮಾಜಿಕ ಬದ್ಧತೆ ಮತ್ತು ಸಾರ್ವಜನಿಕ ಸೇವೆಯ ದಾಖಲೆಗಳನ್ನು ಪರಿಶೀಲಿಸಿ ಬೆಂಬಲಿಸುವುದು ಇಂದಿನ ಪ್ರಮುಖ ಅಗತ್ಯವಾಗಿದೆ ಕೊಡಗಿನಲ್ಲಿ ಮುಸ್ಲಿಂ ನಾಯಕತ್ವ ಬೆಳೆಯಬೇಕು ಅದು ಕೇವಲ ಸಮುದಾಯದ ಪ್ರತಿನಿಧಿತ್ವಕ್ಕೆ ಸೀಮಿತವಾಗದೆ ಕೊಡಗಿನ ಸಮಗ್ರ ಹಿತವನ್ನು ಪ್ರತಿಬಿಂಬಿಸುವ ಪಾರದರ್ಶಕ ಪ್ರಾಮಾಣಿಕ ದೂರದೃಷ್ಟಿಯುತ ಮತ್ತು ಜವಾಬ್ದಾರಿಯುತ ನಾಯಕತ್ವವಾಗಿರಬೇಕು*
*ಕೊಡಗಿನ ಮುಸ್ಲಿಂ ಸಮುದಾಯದ ರಾಜಕೀಯ ಪ್ರಾತಿನಿಧ್ಯವು ಯಾರ ಮೇಲಿನ ಕರುಣೆ ಅಥವಾ ದಯೆಯ ಫಲವಲ್ಲ ಅದು ಸಂವಿಧಾನಬದ್ಧ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ಅವಿಭಾಜ್ಯ ಭಾಗವಾಗಿದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಮಾನಗಳ ಮೀಸಲಾತಿಯಲ್ಲಿಯೂ ಇದೇ ನ್ಯಾಯದ ತತ್ವ ಅನ್ವಯಿಸಬೇಕು. ಈ ಹಕ್ಕನ್ನು ಜವಾಬ್ದಾರಿಯುತವಾಗಿ ಪಡೆಯಲು ಒಗ್ಗಟ್ಟು ಜಾಗೃತಿ ಸಂಘಟನೆ ಶಿಕ್ಷಣ ಮತ್ತು ಸಮರ್ಥ ನಾಯಕತ್ವ ಅಗತ್ಯ ನಮ್ಮ ಧ್ವನಿ ಸ್ಪಷ್ಟವಾಗಿರಲಿ ನಮ್ಮ ನಡೆ ಪ್ರಾಮಾಣಿಕವಾಗಿರಲಿ ನಮ್ಮ ಗುರಿ ಕೊಡಗಿನ ಸಮಗ್ರ ಜನಹಿತವಾಗಿರಲಿ*
*ಒಗ್ಗಟ್ಟೇ ನಮ್ಮ ಶಕ್ತಿ* *ಜಾಗೃತಿಯೇ ನಮ್ಮ ದಾರಿ ಪ್ರಾಮಾಣಿಕ ನಾಯಕತ್ವವೇ ನಮ್ಮ ಭವಿಷ್ಯ. ಪರಸ್ಪರ ಗೌರವ ಸಹಕಾರ ಮತ್ತು ಸಾಮಾಜಿಕ ನ್ಯಾಯದ ಆಧಾರದ ಮೇಲೆ ಕೊಡಗಿನ ಮುಸ್ಲಿಂ ಸಮುದಾಯವು ಜಿಲ್ಲೆಯ ಎಲ್ಲ ಸಮುದಾಯಗಳೊಂದಿಗೆ ಕೈಜೋಡಿಸಿ ತನ್ನ ನ್ಯಾಯಯುತ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತಾ ಇನ್ನಷ್ಟು ಬಲಿಷ್ಠವಾಗಿ ಮುನ್ನಡೆಯಲಿ*
*ನಾನು ಯಾವುದೇ ಪಕ್ಷದ ಪರವಲ್ಲ ಜನರ ಹಿತ ಸಾಮಾಜಿಕ ನ್ಯಾಯ ಮತ್ತು ಕೊಡಗಿನ ಮುಸ್ಲಿಂ ಸಮುದಾಯದ ನ್ಯಾಯಯುತ ಪ್ರಾತಿನಿಧ್ಯದ ಪರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಮಾನಗಳಲ್ಲಿ ನಮಗೆ ಬೇಕಿರುವುದು ದಯೆಯಲ್ಲ ನಮ್ಮ ಹಕ್ಕು ಎಂದು ಕುಶಾಲನಗರದ ಎಂ.ಎಂ. ದಾವುದ್ ತಿಳಿಸಿದ್ದಾರೆ.
Back to top button
error: Content is protected !!