ಕಾರ್ಯಕ್ರಮ

ಕುಶಾಲನಗರ ಮಹಿಳಾ ಸಮಾಜದಲ್ಲಿ ನವರಾತ್ರಿ ಪೂಜೆಗೆ ಚಾಲನೆ

ಕುಶಾಲನಗರ, ಅ 11: ದಸರಾ ಹಬ್ಬದ ಅಂಗವಾಗಿ ಕುಶಾಲನಗರ ಮಹಿಳಾ ಸಮಾಜದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತಿರುವ ನವರಾತ್ರಿ ಉತ್ಸವಕ್ಕೆ ಭಕ್ತಿಭಾವದ ವಾತಾವರಣದಲ್ಲಿ ಚಾಲನೆ ದೊರೆಯಿತು.

ಕಳೆದ ಸುಮಾರು 60 ವರ್ಷಗಳಿಂದ ನಿರಂತರವಾಗಿ ನವರಾತ್ರಿ ಪೂಜೆಯನ್ನು ಆಚರಿಸಿಕೊಂಡು ಬರುತ್ತಿರುವ ಮಹಿಳಾ ಸಮಾಜದಲ್ಲಿ, ಉತ್ಸವದ ಮೊದಲ ದಿನದಂದು ದುರ್ಗಾದೇವಿಯ ಮೊದಲ ಅವತಾರವಾದ ಶ್ರೀ ಶೈಲಪುತ್ರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.

ಪ್ರತಿ ವರ್ಷವೂ ನವರಾತ್ರಿ ಸಂದರ್ಭದಲ್ಲಿ ಮಹಿಳಾ ಸಮಾಜದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಆಚರಣೆಯು ಸ್ಥಳೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಮುಂದಿನ ದಿನಗಳಲ್ಲಿಯೂ ನವರಾತ್ರಿಯ ವಿವಿಧ ದಿನಗಳಿಗೆ ಅನುಗುಣವಾಗಿ ದೇವಿಯ ಆರಾಧನೆ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!