ಕುಶಾಲನಗರ, ಅ 07: ಸರಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಸಾರಿಗೆ ಬಸ್ ಫುಟ್ ಬೋರ್ಡ್ ಮೇಲೆ ನಿಂತು ಸಂಚರಿಸುವ ದೂರಿನ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾದ ಕುಶಾಲನಗರ ಸಂಚಾರಿ ಪೊಲೀಸರು ವಿದ್ಯಾರ್ಥಿಗಳಿಗೆ ಕ್ಲಾಸ್ ತೆಗೆದುಕೊಂಡರು.
ಸಂಚಾರಿ ಠಾಣಾ ಎಸ್.ಐ.ಗೀತಾ ಅವರು ಖುದ್ದು ಸಾರಿಗೆ ಬಸ್ ನಿಲ್ದಾಣಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ನೀತಿ ಪಾಠ ಮಾಡಿದರು. ನಿಲ್ದಾಣದಲ್ಲಿ ಸುಮ್ಮನೆ ಕಾಲಹರಣೆ ಮಾಡದೆ, ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದಂತೆ ಜಾಗೃತಿ ಮೂಡಿಸಿದರು.
Back to top button
error: Content is protected !!