ಕಾರ್ಯಕ್ರಮ

ಡ್ರೀಮ್ ಡೀಲ್ ಕಂಪನಿಯಿಂದ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ

ಸುಂಟಿಕೊಪ್ಪ, ಅ 05:- ಇಲ್ಲಿನ ಮಾದಾಪುರ ರಸ್ತೆಯ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಸಭಾಂಗಣದಲ್ಲಿ ಡ್ರೀಮ್ ಡೀಲ್ ಕಂಪನಿಯಿಂದ ವ್ಯಾಪಾರ ಅಭಿವೃದ್ಧಿ ಕಾರ್ಯಾಗಾರ ನಡೆಯಿತು . ಕಂಪನಿಯಿಂದ ನಡೆಸುವ ವ್ಯಾಪಾರದಿಂದ ಸಾರ್ವಜನಿಕರಿಗೆ ಆಗುವ ಅನುಕೂಲದ ಬಗ್ಗೆ ಮತ್ತು ಸ್ವದೇಶಿ ವಸ್ತುಗಳಾದ ಮರದ ಪೀಠೋಪಕರಣ ಎಲೆಕ್ಟ್ರಾನಿಕ್ ವಸ್ತುಗಳು ಬಂಗಾರದ ಒಡವೆಗಳು ತಿಂಗಳಿಗೆ 1000 ರೂ ಪಾವತಿ ಲಕ್ಕಿ ಡಿಪ್ ಮೂಲಕ ಅದೃಷ್ಟವಂತರಿಗೆ ಲಭ್ಯವಾಗಲಿದೆ. ಎಲ್ಲಾ ವ್ಯವಹಾರಗಳು ಕಾನೂನು ಬದ್ದವಾಗಿ ನಡೆಯುತ್ತಿದ್ದು ಸಂಸ್ಥೆಗೆ ಬೆಂಬಲಿಸುವಂತೆ ಸಂಸ್ಥೆಯ ನಿರ್ದೇಶಕರಾದ ಪ್ರಜ್ವಲ್ ಸಭೆಯಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಪಂಚಾಯಿತಿ ಅಧ್ಯಕ ಪಿ.ಆರ್. ಸುನೀಲ್ ಕುಮಾರ್ ಮಾತನಾಡಿ ಶೂನ್ಯದಿಂದ ಸಣ್ಣ ಉಧ್ಯಮದಿಂದ ಅತೀ ಎತ್ತರಕ್ಕೆ ಬೆಳೆದು ಡ್ರೀಮ್ ಡೀಲ್ ಸಂಸ್ಥೆ ಹಲವಾರು ಕುಟುಂಬಗಳ ದುಡಿಯುವ ಉದ್ಯೋಗ ನೀಡಿ ಲಕ್ಷಾಂತರ ಗ್ರಾಹಕರ ವಿಶ್ವಾಸ ಪಡೆದು ಸ್ಪದೇಶಿ ವಸ್ತುಗಳ ಮಾರಾಟ ಜೊತೆಗೆ ಲಕ್ಕಿ ಡ್ರಾ ಪ್ರವಾಸ ಹಲವಾರು ಪ್ರಯೋಜನ ಪಡೆಯಲು ಅವಕಾಶವಿದೆ. ಈ ಸಂಸ್ಥೆಯಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿ ಸೇರ್ಪಡೆ ಗೊಂಡಿದ್ದು ಡ್ರೀಮ್ ಡೀಲ್ ಸಂಸ್ಥೆ ಪಾರದರ್ಶಕತೆಯಿಂದ ವ್ಯವಹಾರ ನಡೆಸುವಂತೆ ಹೇಳಿದರು. ಈ ಸಂದರ್ಬ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್. ಸುನೀಲ್ ಕುಮಾರ್ ಇತರ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಸ್ಥೆಯ ನಿರ್ದೇಶಕರರಾದ ರೋಹಿತ್, ಬಾಲಕೃಷ್ಣ ‘ ಹಿರಿಯ ಸಂಚಾಲಕಿ ಗೀತಾ ರಂಗರಾಜ್ ‘ ಶೃತಿ ‘ ಸಹನಿರ್ದೇಶಕಿ. ದೇವಕ್ಕಿ, ಭಾಮಿನ ಜೈ ಬಾಲ’ ಸಿ.ಅಶೋಪತಿ, ನಾಗಮ್ಮ ‘ ಶಶಿಕಲಾ ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!