ಟ್ರೆಂಡಿಂಗ್
ಆನೆಕಾಡು ಬಳಿ ಸರಣಿ ಅಪಘಾತ: ಮೂವರ ದುರ್ಮರಣ: ಹಲವರು ಗಂಭೀರ

ಕುಶಾಲನಗರ, ಸೆ 20: ಕುಶಾಲನಗರ-ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಪಿಕ್ ಅಪ್ ಮತ್ತು ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಸ್ವಿಫ್ಟ್ ಕಾರು ಚಾಲಿಸುತ್ತಿದ್ದ 7ನೇ ಹೊಸಕೋಟೆಯ ಎಲೆಕ್ಟ್ರಿಷಿಯನ್ ರತನ್ @ ಉಣ್ಣಿ (35), ಆದರ್ಶ್ ಸೇರಿದಂತೆ ಅರಣ್ಯ ಇಲಾಖೆಯ ಮಡಿಕೇರಿ ಸಿಬ್ಬಂದಿ ಸಿಸಿಎಫ್ ಕ್ವಾರ್ಟರ್ಸ್ ನ ವಾಚ್ ಮೆನ್ ಕುಮಾರ್ (45) ಮೃತಪಟ್ಟಿದ್ದಾರೆ.




