ಕುಶಾಲನಗರ, ಆ 30: ಪಟ್ಟಣದ ಬಿಎಂ ರಸ್ತೆಯ ವಿಶ್ವಗಿರಿ ಕಾಂಪ್ಲೆಕ್ಸ್ ನಲ್ಲಿ ಆರಂಭಿಸಲಾದ ದಿ.ಗುಂಡೂರಾವ್ ಕ್ರೀಡಾಂಗಣ ಸಮಿತಿ, ಚಾರಿಟೇಬಲ್ ಟ್ರಸ್ಟ್ ನೂತನ ಕಚೇರಿಯನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು.
ನಂತರ ನೂತನ ಕಚೇರಿಯಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ಕ್ರೀಡೆ ಪ್ರತಿಯೊಬ್ಬರಿಗೂ ಅಗತ್ಯ, ಉತ್ತಮ ಆರೋಗ್ಯ ಹೊಂದಲು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರೀಯ ಭಾಗವಹಿಸಬೇಕು.ಮಾದಕ ದುಶ್ಚಟಗಳಿಂದ ಯುವಕರು ಹೊರಬರಬೇಕು. ಪುರಸಭೆ ಹೆಸರಿನಲ್ಲಿರುವ ಗುಂಡೂರಾವ್ ಬಡಾವಣೆ ಮೈದಾನದ ಜಾಗವನ್ನು ಗುಂಡೂರಾವ್ ಕ್ರೀಡಾಂಗಣ ಸಮಿತಿ ಹೆಸರಿಗೆ
ಆರ್ ಟಿ ಸಿ ಮಾಡಿಕೊಡುವ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಜಾತ್ರೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ತೊಂದರೆ ಆಗದಂತೆ ಪ್ರತ್ಯೇಕವಾಗಿ ಮೈದಾನಕ್ಕೆ ಜಾಗ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ.ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಉತ್ತಮ ವೇದಿಕೆ ಹಾಗೂ ಶೌಚಾಲಯ ನಿರ್ಮಿಸಿಕೊಡಲು ಅಗತ್ಯ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು. ಸಂಘದ ನಿಯಮಗಳು ಕ್ರೀಡಾ ಚಟುವಟಿಕೆಗಳಿಗೆ ಪೂರಕವಾಗಿರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಶಾಸಕರು
ಜಾತ್ರಾ ಸಮಿತಿ ಹಾಗೂ ಕ್ರೀಡಾಂಗಣ ಸಮಿತಿಯ ಜಂಟಿ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಕುಶಾಲನಗರಕ್ಕೆ ಒಳಾಂಗಣ ಅಗತ್ಯವಾಗಿದ್ದು,ಬೇರೆ ಕಡೆ ಸ್ಥಳ ಗುರುತಿಸಿ ಯೋಜನೆ ಕಾರ್ಯಗತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.ಇಲ್ಲಿ ಕ್ರೀಡೆ,ಸಾಂಸ್ಕೃತಿಕ, ಕಲೆ,ಧಾರ್ಮಿಕ ಹಾಗೂ ಸೃಜನಶೀಲ ಚಟುವಟಿಕೆಗಳಿಗೆ ಸೂಕ್ತವಾದ ಸ್ಥಳ ಅವಶ್ಯಕತೆ ಇದೆ.ಕ್ರೀಡೆ ಸಾಮರಸ್ಯವನ್ನು ಬೆಸೆಯುತ್ತದೆ.ಕ್ರೀಡಾಂಗಣ ಅಗತ್ಯವಾಗಿದೆ ಬೇಕಾಗಿದೆ.ಗುಂಡೂರಾವ್ ಬಡಾವಣೆಯಲ್ಲಿ ಆಸ್ಪತ್ರೆ ಮಂಜೂರು ಆಗಿತ್ತು.ಆದರೆ ಶಾಸಕರು ತಾಲ್ಲೂಕು ಆಸ್ಪತ್ರೆ ಬೇರೆ ಜಾಗವನ್ನು ಗುರುತಿ ಅಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿದೆ.ಮುಂದಿನ ದಿನಗಳ ಗುಂಡೂರಾವ್ ಬಡಾವಣೆಯಲ್ಲಿ ಉತ್ತಮವಾದ ಮೈದಾನ ನಿರ್ಮಾಣವಾಗಲಿದೆ.ಈ ಜಾಗದಲ್ಲಿ ಊರಿನ ಪರಂಪರೆ ಜಾತ್ರೆ ನಡೆಸಲು ಹಾಗೂ ರಚನಾತ್ಮಕ ಚಟುವಟಿಕೆ ನಡೆಸಲು ಅವಕಾಶ ವಾಗುತ್ತದೆ.ಆದ್ದರಿಂದ ಮೈದಾನ ಸಮಿತಿ ವತಿಯಿಂದ ಉತ್ತಮ ರೀತಿಯಲ್ಲಿ ಮೈದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮಿತಿ ಉಪಾಧ್ಯಕ್ಷ ಮಣಿ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಹಾಗೂ ಕ್ರೀಡಾ ಪ್ರತಿಭೆಗಳನ್ನು ಬೆಳೆಸಲು ಸೂಕ್ತ ಮೈಮೈದಾನದ ಕೊರತೆ ಎದ್ದು ಕಾಣುತ್ತಿತ್ತು.
ಶಾಲಾ,ಕಾಲೇಜು ಮೈದಾನಗಳಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಗುಂಡೂರಾವ್ ಬಡಾವಣೆಯಲ್ಲಿ ಸುಸಜ್ಜಿತವಾದ ಮೈದಾನ ಹಾಗೂ ಕಾರ್ಯಕ್ರಮಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸಿ ಮಾತನಾಡಿ,ಶಾಶ್ವತವಾದ ಮೈದಾನ ನಿರ್ಮಿಸುವ ಉದ್ದೇಶದಿಂದ ಸಮಿತಿ ರಚನೆ ಮಾಡಿ ನನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಾರೆ. ಈ ಜಾಗದಲ್ಲಿ ಆಸ್ಪತ್ರೆ ನಿರ್ಮಾಣಗೊಂದಲವಿತ್ತು ಇದೀಗ ಸಮಸ್ಯೆ ಬಗೆಹರಿದಿದೆ.ಆಸ್ಪತ್ರೆಗೆ ಬೇರೆ ಕಡೆ ಜಾಗ ಗುರುತಿಸಿದ್ದಾರೆ ಎಂದರು.ಕ್ರೀಡಾಂಗಣ ಉಳಿಸಿ ಅಭಿವೃದ್ಧಿ ಪಡಿಸಲು ಒತ್ತು ನೀಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಮಿತಿ ಗೌರವ ಅಧ್ಯಕ್ಷ ಪವನ್ ಗಣಪತಿ,ಉಪಾಧ್ಯಕ್ಷರಾದ ಮಣಿ,ಫಯಾಜ್,ಪ್ರದಾನ ಕಾರ್ಯದರ್ಶಿ ಆದಂ,ಸಂಘಟನಾ ಕಾರ್ಯದರ್ಶಿ ರಕ್ಷಿತ್ ಮಾವೋಜಿ,ಖಜಾಂಚಿ ಉತ್ತಪ್ಪ,ಸಂಚಾಲಕರು ಮಹದೇವ ಮತ್ತು ಸಮಿತಿ ಸದಸ್ಯರು ಹಾಗೂ ಕಾನೂನು ಸಲಹೆಗಾರ ವಕೀಲ ಶಿವಮೂರ್ತಿ ಪಾಲ್ಗೊಂಡಿದ್ದರು. ಸಮಿತಿ ವತಿಯಿಂದ ಶಾಸಕ ಮಂತರ್ ಗೌಡ ಹಾಗೂ ಕಾನೂನು ಸಲಹೆಗಾರ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಿದರು.
Back to top button
error: Content is protected !!