ಕಾರ್ಯಕ್ರಮ

ಮಗುವಿನ ಸದೃಡ ಆರೋಗ್ಯಕ್ಕೆ ಸ್ತನಪಾನ ಅವಶ್ಯ…. ಡಾ. ಮಧುಸೂದನ್ ಅಭಿಪ್ರಾಯ

ಕುಶಾಲನಗರ ಆ 14: ಯಾವುದೇ ರೀತಿಯ ಆರೈಕೆಗಿಂತ ಮಗುವಿನ ಸದೃಡ ಆರೋಗ್ಯಕ್ಕೆ ಸ್ತನಪಾನ ಅತ್ಯಂತ ಅವಶ್ಯ. ಮಹಿಳೆಯರು ಯಾವುದೇ ಅಂಜಿಕೆಯಿಲ್ಲದೆ ತಮ್ಮ ಮಗುವಿಗೆ ಹಾಲು ಕುಡಿಸಬೇಕು ಎಂದು ಕುಶಾಲನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಧುಸೂದನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ ಇನ್ನರ್ ವೀಲ್ ಸಂಸ್ಥೆ ಮತ್ತು ಸಮುದಾಯ ಆರೋಗ್ಯ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ವಿಶ್ವ ಸ್ತನಪಾನ ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದ ಡಾ.ಮಧುಸೂದನ್, ಮಗುವಿನ ಬೆಳವಣಿಗೆ ದೃಷ್ಟಿಯಿಂದಲೂ ತಾಯಿಯ ಎದೆ ಹಾಲು ಅವಶ್ಯ. ಮಹಿಳೆಯರಿಗೂ ಎದೆ ಹಾಲು ಉಣಿಸುವುದರಿಂದ ಅವರ ಚೆಂದವೂ ಹೆಚ್ಚಾಗುತ್ತೆ. ಈ ರೀತಿಯ ಹಲವು ವಿಚಾರಗಳನ್ನು ಹಾಜರಿದ್ದ ಬಾಣಂತಿಯರಿಗೆ ವಿವರಿಸಿದರು.
ವೈದ್ಯ ಡಾ.ಶಿವಕುಮಾರ್ ಮಾತನಾಡಿ, ವೈಜ್ಞಾನಿಕವಾಗಿ ಒಬ್ಬ ಬಾಣಂತಿ ಮಗುವಿನೊಂದಿಗಿನ ನಡವಳಿಕೆ ಹೇಗೆ ಇರಬೇಕೆಂದು ಸವಿಸ್ತಾರವಾಗಿ ಮನದಟ್ಟು ಮಾಡಿದರು. ಸ್ತನಪಾನದ ಬಗ್ಗೆ ಗ್ರಾಮೀಣ ಭಾಗದ ಜನರಲ್ಲಿ ಇರುವ ಮೂಢನಂಬಿಕೆಯ ಬಗ್ಗೆಯೂ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷೆ ಸೀತಾಲಕ್ಷ್ಮಿ ಮಾತನಾಡಿ, ಸ್ತನಪಾನದಿಂದ ತಾಯಿ ಮಗುವಿನ ಭಾವನಾತ್ಮಕ ಸಂಬಂಧ ದೃಪಡುವುದಲ್ಲದೆ, ಮಕ್ಕಳು ಭವಿಷ್ಯದಲ್ಲಿ ಸದೃಢ ನಾಗರೀಕರಾಗಿ ರೂಪುಗೊಳ್ಳುವರು ಎಂದು ತಿಳಿಸಿದರು. ಜಿಲ್ಲಾ ಅರೋಗ್ಯ ಅಧಿಕಾರಿ ಶಾಂತಿ ಸ್ತನಪಾನದ ಸಂರಕ್ಷಣೆಯ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಾಲಿನಿ ನರೇಂದ್ರ, ISO ಚಿತ್ರಾ ರಮೇಶ್, ಖಜಾಂಚಿ ಕುಸುಮ ನಟೇಶ್, ಹಿಂದಿನ ಅಧ್ಯಕ್ಷರಾದ ಸುನೀತಾ ಮಹೇಶ್, ಶೀನ ಪ್ರಕಾಶ್ ಮತ್ತು ರೂಪ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!