ಕುಶಾಲನಗರ, ಆ 12: ಭೀಮನ ಅಮವಾಸ್ಯೆ ದಿನವನ್ನು ಹಿಂದೂಗಳ ಆಚರಣೆಗಳಲ್ಲಿ ಪೂರ್ವಜರ ಸ್ಮರಣೆ ಮತ್ತು ಪೂರ್ವಜರ ತ್ಯಾಗಕ್ಕೆ ಅತ್ಯಂತ ಪ್ರಮುಖ ದಿನವೆಂದು ಪರಿಗಣಿಸಿ ಪಿತೃ ತರ್ಪಣ ಅರ್ಪಿಸುವುದು ವಾಡಿಕೆ.
ಅದರಂತೆ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕಾವೇರಿ ನದಿಯ ತಟದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಟ್ರಸ್ಟ್ , ಎಸ್ ಎನ್ ಡಿ ಪಿ ಕುಶಾಲನಗರ ಶಾಖೆ ಹಾಗೂ ಕೇರಳ ಸಮಾಜದ ಸಹಭಾಗಿತ್ವದಲ್ಲಿ ನಾಲ್ಕನೆಯ ವರ್ಷದ ಪಿತೃ ತರ್ಪಣ ಕಾರ್ಯಕ್ರಮ ನಡೆಯಿತು.
ಬುಧವಾರ ಬೆಳಗ್ಗೆ 6 ಗಂಟೆಯಿಂದ ನದಿಯ ತಟದಲ್ಲಿ ತಂತ್ರಿ ರಾಮಣ್ಣ ಶಾಂತಿ ಅವರಿಂದ ಪೂಜೆ ವಿಧಿ ವಿಧಾನಗಳನ್ನು ನಡೆಯಿತು.
ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಹಾಗೂ ಹೊರ ಜಿಲ್ಲೆಗಳಿಂದ ಸುಮಾರು 700 ಹೆಚ್ಚು ಜನರು ಪಾಲ್ಗೊಂಡಿದ್ದರು. ಪಿತೃ ತರ್ಪಣ ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮ ಆಯೋಜಕರು ಕಾವೇರಿ ನದಿ ತೀರದ ಸೋಪಾನಕಟ್ಟೆ ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು.
ಪಿತೃ ತರ್ಪಣ ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪ ಟ್ರಸ್ಟ್ ಅಧ್ಯಕ್ಷ ಕೆ.ವರದ, ಎಸ್ ಎನ್ ಡಿ ಪಿ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೆ.ಟಿ.ಗಣೇಶ್, ಉಪಾಧ್ಯಕ್ಷ ಕರಣ್,ಕಾರ್ಯದರ್ಶಿ ಅನೀಶ್ ಕುಮಾರ್,ಖಜಾಂಚಿ ಟಿ.ಎಸ್.ಉದಯ್,ಸದಸ್ಯರಾದ ಎಂ.ಆರ್.ಚಂದ್ರನ್ ,ಗೋಪಿ ಕೃಷ್ಣ,ಎನ್ .ಸಿ.ಡಾಲು,ಟಿ.ಕೆ.ಬಾಲಕೃಷ್ಣ ಮುಂತಾದವರು ಇದ್ದರು.
Back to top button
error: Content is protected !!