ಕುಶಾಲನಗರ, ಸೆ 22: ಮಳೆಯ ಕೊರತೆ ರಾಜ್ಯವನ್ನು ಬಾಧಿಸಿದೆ. ಕೊಡಗಿನ ಕುಶಾಲನಗರ ತಾಲೂಕು ಇದರಿಂದ ಹೊರತಾಗಿಲ್ಲ. ತೀವ್ರ ಬರದ ಸಮಸ್ಯೆ ಎದುರಿಸುತ್ತಿರುವ ಕುಶಾಲನಗರ ತಾಲೂಕನ್ನು ಕೂಡಲೆ ಬರಪೀಡಿತ ಎಂದು ಪರಿಗಣಿಸಿ ಪರಿಹಾರ ಘೋಷಿಸುವಂತೆ ಕುಶಾಲನಗರ ಎಪಿಸಿಎಂಎಸ್ ನಿರ್ದೇಶಕರೂ ಆದ ಕೊಡಗು ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ (ವಾಸುದೇವ್ ಮೇಟಿ ಬಣ) ಹೆಚ್.ಜೆ.ಶರತ್ ಸರಕಾರವನ್ನು ಒತ್ತಾಯಿಸಿದ್ದಾರೆ. ಮಳೆಯಿಲ್ಲದೆ ಎಲ್ಲಾ ಬೆಳೆಗಳು ಸೋರಗಿವೆ. ನದಿ, ಕೆರೆಗಳು ಬತ್ತಿಹೋಗಿವೆ. ಜನಜಾನುವಾರುಗಳಿಗೂ ನೀರಿಲ್ಲದೆ,ಮೇವಿಲ್ಲದ ಪರಿಸ್ಥಿತಿ ಎದುರಾಗಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇಷ್ಟೆಲ್ಲಾ ಸಮಸ್ಯೆ ಎದುರಿಸುತ್ತಿದ್ದರೂ ಕೂಡ ಕುಶಾಲನಗರವನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಸರಕಾರ ಮೀನಾಮೇಷ ಎಣಿಸಬಾರದು. ಕೂಡಲೆ ಬರಪೀಡಿತ ಎಂದು ಘೋಷಿಸಿ ರೈತರು, ಬೆಳೆಗಾರರ ಹಿತ ಕಾಯಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
Back to top button
error: Content is protected !!