ಕೂಡಿಗೆ ,ಸೆ. 21:ಕೂಡಿಗೆ ಕೊಡವ ಕೂಟದ ವಾರ್ಷಿಕ ಮಹಾಸಭೆ ಮತ್ತು ಕೈಲ್ ಮುಹೂರ್ತ ಹಬ್ಬದ ಸಂತೊಷ ಕೂಟವು ರಾಮೇಶ್ವರ ಕೂಡುಮಂಗಳೂರು ಸಹಕಾರ ಭವನದ ಸಬಾಂಗಣದಲ್ಲಿ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅವರ ಅದ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅಥಿತಿಯಾಗಿ ಗುಡ್ಡೆಹೊಸೂರು ಕೊಡವ ಕೂಟದ ಅಧ್ಯಕ್ಷ ಮಾಳೇಟಿರ ಪೂಣಚ್ಚ ಆಗಮಿಸಿ ಕೈಲ್ ಮುಹೂರ್ತ ಹಬ್ಬದ ಹಿನ್ನಲೆ ವಿವರಿಸಿದರು.
ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಮಾತನಾಡಿ, ನಮ್ಮ ಜಮ್ಮ ಭೂಮಿಯನ್ನು ಯಾರೂ ಕೂಡ ಪರಭಾರೆ ಮಾಡಬಾರದು. ಪೋಷಕರು ಮಕ್ಕಳ ಶಿಕ್ಷಣ ಹಾಗೂ ಚಟುವಟಿಕೆಗಳ ಬಗ್ಗೆ ಎಚ್ಚರವಹಿಸಬೇಕು. ಮಕ್ಕಳೂ ಕೀಡ ಪೋಷಕರ ಬಗ್ಗೆ ಪ್ರೀತಿ ವಿಶ್ವಾಸ ಉಳಿಸಿಕೊಂಡು, ಆಚಾರ ವಿಚಾರ ಸಂರಕ್ಷಣೆ ಮಾಡುವುದು ಆದ್ಯ ಕರ್ತವ್ಯ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಂಗವಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಮತ್ತು ಹಲವು ಆಟೋಟ ಸ್ಪರ್ಧೆಗಳು ನಡೆದವು.
ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವೇದಿಕೆಯಲ್ಲಿ ಕೂಟದ ಕಾರ್ಯದರ್ಶಿ ಮುಂಡಂಡ ಸತೀಶ್, ಖಚಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ, ಐಮುಡಿಯಂಡ ರಮೇಶ , ಪಟ್ಟಡ ಚಿಟ್ಟಿಯಪ್ಪ , ಮುಕ್ಕಾಟಿರ ಮನು ತಿಮ್ಮಣ್ಣ, ಪಟ್ಟಡ ಬೀನಾ , ಪಾಲೆಕಂಡ ಸುಜಾತ ಉಪಸ್ಥಿತರಿದ್ದರು. ದೇಯಂಡ ಸವಿ ಪೊನ್ನಪ ಮತ್ತು ಐಮುಡಿಯಂಡ ಸವಿತ ರಮೇಶ ಸ್ವಾಗತಿಸಿದರು ಕೊಳುವಂಡ ಮಂದಪ್ಪ ವಂದಿಸಿದರು.
Back to top button
error: Content is protected !!