ಕೂಡಿಗೆ , ಜು. 29: ಕುಶಾಲನಗರ ಶ್ರೀ ಚೌಡೇಶ್ವರಿ ದೇವಸ್ಥಾನ. ದೇವಾಂಗ ಸಂಘದ ವತಿಯಿಂದ ಗುರುಪೂರ್ಣಿಯ ವಿಶೇಷ ಅಂಗವಾಗಿ ಗುರು-ಹಿರಿಯರ ವಂದನ ಕಾರ್ಯಕ್ರಮವು ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕುಶಾಲನಗರ
ದೇವಾಂಗ ಸಂಘದ ಅಧ್ಯಕ್ಷ ಡಿ .ವಿ. ರಾಜೇಶ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತಾನಾಡುತ್ತಾ ಗುರುಪೂರ್ಣಿಮೆಯ ಸವಿಸ್ತಾರವಾದ ವಿಷಯದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಡಿ.ಎಸ್. ಜಗದೀಶ್ ಹಾಗೂ ಡಿ.ಎಸ್ .ಕೋದಂಡರಾಮ,
ದೇವಾಂಗ ಸಂಘದ ಉಪಾಧ್ಯಕ್ಷರಾದ ಡಿ .ವಿ. ಚಂದ್ರು (ರಾಕಿ), ಪ್ರಧಾನ ಕಾರ್ಯದರ್ಶಿ ಕೃಷ್ಣಕುಮಾರ್, ಖಜಾಂಚಿ ಡಿ.ಜಿ ಪ್ರದೀಪ್, ಮಹಿಳಾ ಸಂಘದ ಅಧ್ಯಕ್ಷೆ ಪದ್ಮ ಮಹೇಶ್, ಶುಭ ಅನಿಲ್, ರೂಪ ಕುಮಾರ್, ಶೋಭ ಸೋಮಶೆಟ್ಟಿ, ಗೀತಾ ಸೋಮಶೇಖರ್, ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಪಿ. ಗಣೇಶ್, ವೇದಿಕೆಯಲ್ಲಿ ಹಾಜರಿದ್ದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ವತಿಯಿಂದ ಹಿರಿಯ ತಾಯಂದಿರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಫಲತಂಬೂಲ ಸೇರಿದಂತೆ ನೆನಪಿನ ಕಾಣಿಕೆ ನೀಡುವುದರ ಮೂಲಕ 22 ಮಂದಿಯನ್ನು ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ದೇವಾಲಯದ ಪ್ರಧಾನ ಅರ್ಚಕ ಪ್ರಸನ್ನ ಭಟ್ ರವರಿಂದ ನೆರವೇರಿತು.
Back to top button
error: Content is protected !!