ಕುಶಾಲನಗರ, ಜು 27: ಮಾದಾಪಟ್ಟಣದಲ್ಲಿ ದಶಕಗಳಿಂದ ಮುಂದುವರೆದುಕೊಂಡು ಬಂದಿರುವ ಕಾಡಾನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ನಿರ್ಲಕ್ಷ್ತ ವಹಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾದಾಪಟ್ಟಣದ ಪುಟ್ಟ ಎಂಬವರ ಜಮೀನಿಗೆ ಅತ್ತೂರು ಮೀಸಲು ಅರಣ್ಯದಿಂದ ದಾಳಿ ನಡೆಸಿದ ಕಾಡಾನೆ ಅಪಾರ ಪ್ರಮಾಣದಲ್ಲಿ ಜೋಳದೆ ಬೆಳೆ ನಾಶಗೊಳಿಸಿದೆ. ಕಾಡಾನೆ ಜಮೀನಿನ ಮೂಲಕ ಹಾದು ಅರಣ್ಯದತ್ತ ತೆರಳಿದೆ. ಜಮೀನು ವ್ಯಾಪ್ತಿಯಲ್ಲಿ ಆನೆ ಕಂದಕ ದುರಸ್ಥಿಗೊಳಿಸುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ರೈತ ಪುಟ್ಟ ಹಾಗೂ ಗುಡ್ಡೆಹೊಸೂರು ಗ್ರಾಪಂ ಮಾಜಿ ಅಧ್ಯಕ್ಷ ಪ್ರವೀಣ್ ಕುಶಾಲಪ್ಪ ಆರೋಪಿಸಿದ್ದಾರೆ.
ಕಳೆದ 10 ವರ್ಷಗಳಿಂದ ಕಾಡಾನೆ ನಿರಂತರವಾಗಿ ಹಾವಳಿ ನಡೆಸುತ್ತಿದೆ. ಆನೆ ಕಂದಕ ದುರಸ್ಥಿಗೆ ಒತ್ತಾಯಿಸಿ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಕ್ರಮವಹಿಸಿಲ್ಲ. ಪ್ರತಿ ವರ್ಷ ಬೆಳೆನಾಶ ಉಂಟಾಗುತ್ತಿದೆ. ಬೆಳೆನಾಶಕ್ಕೂ ಕೂಡ ಸಮರ್ಪಕವಾಗಿ ಪರಿಹಾರ ದೊರೆಯುತ್ತಿಲ್ಲ. ಸಾಲ ಮಾಡಿ ಕೃಷಿ ಮಾಡುವ ನಾವು ಹೇಗೇ ಬದುಕುವುದು ಎಂದು ಪ್ರಶ್ನಿಸಿದರು.
ಸ್ಥಳಕ್ಕೆ ಅತ್ತೂರು ಶಾಖೆಯ ಡಿ.ಆರ್.ಎಫ್.ಒ. ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಗುಡ್ಡೆಹೊಸೂರು ಗ್ರಾಪಂ ಮಾಜಿ ಸದಸ್ಯ ಶಿವಪ್ಪ ಮತ್ತಿತರರು ಇದ್ದರು.
Back to top button
error: Content is protected !!