ಕುಶಾಲನಗರ, ಜು 25 : ಉತ್ತಮ ಗುಣಮಟ್ಟದ ಹಾಗೂ ನವನವೀನ ಶೈಲಿಯ ಪೀಠೋಪಕರಣಗಳನ್ನು ಖರೀದಿಸಲು ರಾಯಲ್‌ಓಕ್ ಫರ್ನಿಚರ್ ಮಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಕುಶಾಲನಗರದ ತಾವರೆಕೆರೆ ಮುಂಭಾಗ ನೂತನವಾಗಿ ಶುಭಾರಂಭಗೊಂಡಿರುವ ರಾಯಲ್‌ಓಕ್ ಫರ್ನಿಚರ್ ಮಳಿಗೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಯಲ್ ಓಕ್ ಇನ್ ಕಾರ್ಪೋರೇಷನ್ ಪ್ರೈ.ಲಿಮಿಟೆಡ್ ನ ಫ್ರಾಂಚೈಸಿ ಮುಖ್ಯಸ್ಥ ಕಿರಣ್ ಚಾಬ್ರಿಯಾ ಮಾತನಾಡಿ, ರಾಯಲ್ ಓಕ್ ನಲ್ಲಿ ಉತ್ತಮ ಗುಣಮಟ್ಟದ ಅಮೆರಿಕನ್, ಇಟಾಲಿಯನ್, ಮಲೇಷಿಯನ್ ಮತ್ತು ಭಾರತೀಯ ಶೈಲಿಯ ಸೋಫಾಗಳು, ಡೈನಿಂಗ್ ಟೇಬಲ್‌ಗಳು, ಹಾಸಿಗೆಗಳು ಮತ್ತು ಕಚೇರಿಯ ಪೀಠೋಪಕರಣಗಳು ದೊರೆಯಲಿವೆ. ಗ್ರಾಹಕರು ದೂರದ ನಗರ ಪ್ರದೇಶಗಳಿಗೆ ಹೋಗಿ ವಸ್ತುಗಳನ್ನು ಖರೀದಿಸಲು ಅಧಿಕ ವೆಚ್ಚವಾಗುವುದನ್ನು ತಪ್ಪಿಸಲು ತಾಲ್ಲೂಕು ಮಟ್ಟದಲ್ಲಿ ನೂತನ ಮಳಿಗೆಯನ್ನು ಆರಂಭಿಸಲಾಗಿದೆ ಎಂದರು.
ರಾಯಲ್ ಓಕ್ ಕರ್ನಾಟಕ ವಲಯದ ಮುಖ್ಯಸ್ಥ ಅರುಣ್ ಗೌಡ ಮಾತನಾಡಿ,ರಾಯಲ್ ಓಕ್ ಅಂತಾರಾಷ್ಟ್ರೀಯ ಗುಣಮಟ್ಟದ ಮಳಿಗೆಯಾಗಿದ್ದು,ರಾಜ್ಯದಲ್ಲಿ 59 ಶಾಖೆಗಳನ್ನು ಹೊಂದಿದೆ.ಕುಶಾಲನಗರದಲ್ಲಿ ನಮ್ಮ ಫ್ಲ್ಯಾಗ್ ಶಿಪ್ ಸ್ಟೋರ್ ತೆರೆಯಲು ಖುಷಿಯಾಗುತ್ತಿದೆ, ನಾವು ಈಗಾಗಲೇ ಭಾರತದಾದ್ಯಂತ ಮತ್ತು ಯುಎಇಯಲ್ಲಿ 200ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿದ್ದೇವೆ ಎಂದರು.
ಮಳಿಗೆ ಮಾಲೀಕ ಕೆ.ಎಂ.ಮೋಹನ್ ಮಾತನಾಡಿ, ನವನವೀನ ಶೈಲಿಯ ಪೀಠೋಪಕರಣಗಳನ್ನು ಒಂದೇ ಕಡೆ ಖರೀದಿಸುವ ಅವಕಾಶ ರಾಯಲ್ ಓಕ್ ಮಳಿಗೆಯಲ್ಲಿ ಇದೆ.
ಅಂತರರಾಷ್ಟ್ರೀಯ ಶೈಲಿಯ ಸೋಫಾಗಳು, ಡೈನಿಂಗ್ ಸೆಟ್‌ಗಳು ಮತ್ತು ಬೆಡ್‌ಗಳು,ಪ್ರೀಮಿಯಂ ಮರದ ಪೀಠೋಪಕರಣಗಳು ,ಗೃಹಾಲಂಕಾರ ಮತ್ತು ಮ್ಯಾಟ್ರೆಸ್‌ಗಳು ಸೇರಿದಂತೆ ಇನ್ನಿತರ ಆಕರ್ಷಕ ಗುಣಮಟ್ಟದ ವಸ್ತುಗಳು ದೊರೆಯಲಿವೆ. ಆನ್‌ಲೈನ್‌ನಲ್ಲಿ ಮತ್ತು ಬಡ್ಡಿರಹಿತ ಕಂತುಗಳಲ್ಲಿ ವಸ್ತುಗಳನ್ನು ಖರೀದಿಸಬಹುದು ಎಂದು ಹೇಳಿದರು.
ಈ ಸಂದರ್ಭ ಶನಿವಾರಸಂತೆ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ,ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಬಿ. ಆರ್. ನಾಗೇಂದ್ರಪ್ರಸಾದ್, ಚಾರ್ಟರ್ಡ್ ಅಕೌಂಟೆಂಟ್ ಮತ್ತು ರೋಟರಿ ಅಧ್ಯಕ್ಷ ಸಿಎ ರುದ್ರೇಶ್ ಪಟೇಲ್, ರೋಟರಿ ಹಿರಿಯ ಸದಸ್ಯ ಎಂ.ಡಿ.ರಂಗಸ್ವಾಮಿ, ರಾಯಲ್ ಓಕ್ ನ ಗೃಹಾಲಂಕಾರ ಮುಖ್ಯಸ್ಥೆ ಐರಿನಾ ಮೊಶಾಸ್ ಇತರರು ಪಾಲ್ಗೊಂಡಿದ್ದರು.
8,000 ಚದರ ಅಡಿ ವಿಸ್ತೀರ್ಣದಲ್ಲಿರುವ ಈ ಮಳಿಗೆಯು ಮನೆಯ ಪ್ರತಿಯೊಂದು ಭಾಗಕ್ಕೂ ಅಗತ್ಯ ಪೀಠೋಪಕರಣಗಳ ವ್ಯಾಪಕ ಶ್ರೇಣಿಯನ್ನು ಹೊಂದಿದೆ. ವಾಸದ ಕೋಣೆಗಳು, ಮಲಗುವ ಕೋಣೆಗಳು, ಊಟದ ಹಾಲ್, ಅಧ್ಯಯನ ಮತ್ತು ಕಚೇರಿ, ಹೊರಾಂಗಣ, ಗೃಹಾಲಂಕಾರ, ಹಾಸಿಗೆಗಳು ಮುಂತಾದ ಅಗತ್ಯ ಪಿಠೋಪಕರಣಗಳು ಇಲ್ಲಿ ಲಭ್ಯವಿದೆ. ಕುಶಾಲನಗರದ ನಿವಾಸಿಗಳು ಈಗ ಕೈಗೆಟುಕುವ ಬೆಲೆಯಲ್ಲಿ ಸೊಗಸಾದ, ಸ್ಮಾರ್ಟ್ ಮತ್ತು ಕ್ರಿಯಾತ್ಮಕ ಪೀಠೋಪಕರಣಗಳ ವ್ಯಾಪಕ ಶ್ರೇಣಿಯನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.
Back to top button
error: Content is protected !!