ಪ್ರಕಟಣೆ

ಜಿಲ್ಲಾದ್ಯಂತ ಜಲಮೂಲಗಳನ್ನು ಸರಿಪಡಿಸುವ ಮುಖಾಂತರ ಕೆರೆಕಟ್ಟೆಗಳಲ್ಲಿ ಮಳೆ ನೀರನ್ನು ಶೇಖರಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು : ಭಾಸ್ಕರ್ ನಾಯಕ್

ಕುಶಾಲನಗರ, ಜು 20:ಕೆರೆಕಟ್ಟೆಗಳಲ್ಲಿ ಮಳೆ ನೀರನ್ನು ಶೇಖರಣೆ ಮಾಡುವ ಕುರಿತು ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯಕ್ ರವರು ಈ ವರ್ಷ ಪೂರ್ವ ಮುಂಗಾರು ಮತ್ತು ಮುಂಗಾರು ದುರ್ಬಲವಾಗಿರುವುದರಿಂದ ಬರುತ್ತಿರುವ ಅಲ್ಪ ಮಳೆ ನೀರನ್ನಾದರೂ ಶೇಖರಣೆ ಮಾಡುವ ದೃಷ್ಟಿಯಿಂದ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಇರುವಂತಹ ಜಲ ಮೂಲಗಳನ್ನು ಸರಿಪಡಿಸುವ ಮುಖಾಂತರ ಕೆರೆಕಟ್ಟೆಗಳಲ್ಲಿ ಮಳೆ ನೀರನ್ನು ಶೇಖರಣೆ ಮಾಡುವಂತ ಕೆಲಸಕ್ಕೆ ಮುಂದಾಗಬೇಕು ಈ ಬಗ್ಗೆ ತಕ್ಷಣವೇ ಜಿಲ್ಲಾಡಳಿತ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮಾರ್ಗದರ್ಶನ ನೀಡಬೇಕು ಕನಿಷ್ಠ ಈಗಿನಿಂದ ಮಳೆ ನೀರನ್ನು ಶೇಖರಣೆ ಮಾಡಲು ಪ್ರಾರಂಭ ಮಾಡಿದರೆ ಮಾತ್ರ ಮುಂದಿನ ವರ್ಷ ಕುಡಿಯುವ ನೀರಿನ ಅಭಾವವನ್ನು ತಡೆಯಲು ಸಾಧ್ಯವಾಗುತ್ತದೆ, ಮತ್ತು ಜಿಲ್ಲಾಡಳಿತ ಟಾಸ್ಕ್ ಫೋರ್ಸ್ ಸಮಿತಿ ಸಭೆ ಕರೆದು ಮುಂದಿನ ವರ್ಷ ಆಗಲಿರುವ ನೀರಿನ ಅಭಾವವನ್ನು ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!