ಕುಶಾಲನಗರ ಜು 18: ಆರೋಗ್ಯವಂತ ಸಮಾಜ ನಿರ್ಮಾಣ ಅದಾಗ ಮಾತ್ರ ಊರಿನ ಅಭಿವೃದ್ಧಿ ಸಾಧ್ಯ. ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕುಶಾಲನಗರದ ಫಾತಿಮಾ ಕಾನ್ವೆಂಟ್ ಆಡಳಿತ ಮಂಡಳಿ ಅದ್ಬುತ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ಹೇಳಿದರು.
ಕುಶಾಲನಗರದ ಫಾತಿಮಾ ಕಾನ್ವೆಂಟ್ ತನ್ನ 50 ನೇ ವರ್ಷವನ್ನು ಸುವರ್ಣ ಸಂಭ್ರಮದ ಹೆಸರಿನಲ್ಲಿ ಶಾಲೆಯ ವಿಧ್ಯಾರ್ಥಿಗಳು ಹಾಗೂ ಪಾಲಕರಿಗೆ ಶನಿವಾರ ವೈಧ್ಯಕೀಯ ತಪಾಸಣಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಒಂದು ಶಾಲೆ ಕೇವಲ ಶಿಕ್ಷಣಕ್ಕೆ ಮಾತ್ರ ಸೀಮಿತವಾಗದೆ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಇಂತಹ ಶಿಬಿರಗಳಿಂದ ಸಮಾಜದಲ್ಲಿ, ಪೋಷಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡುತ್ತದೆ. ಆರೋಗ್ಯ ಶಿಬಿರದ ಜೊತೆಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿ ಅತ್ಯಂತ ಪುಣ್ಯದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಸೆಂಟ್ ಸಬಾಸ್ಟಿನ್ ಚರ್ಚ್ ನ ಫಾದರ್ ಜ್ಞಾನ ಪ್ರಕಾಶ್, ಶಿಕ್ಷಣ ಸಂಸ್ಥೆಗಳ ಮೂಲಕ ಪುಟಾಣಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಮೂಡಿಸಲು ಇಂತಹ ಶಿಬಿರಗಳಿಂದ ಸಾಧ್ಯ. ಫಾತಿಮಾ ಕಾನ್ವೆಂಟ್ ಶಾಲೆಯ ಶಿಕ್ಷಕ ವೃಂದ ಅತ್ಯುನ್ನತ ಸೇವೆ ನೀಡುತ್ತಾ ಬಂದಿರುವುದನ್ನು ಕೇಳಿದ್ದೇವೆ. ಇಲ್ಲಿ ಓದಿದ ಬಹಳಷ್ಟು ವಿಧ್ಯಾರ್ಥಿಗಳು ಅತ್ಯುತ್ತಮ ಸ್ಥಾನದಲ್ಲಿ ಇದ್ದಾರೆ. ಮುಂದಿನ ದಿನಗಳಲ್ಲಿ ಇದು ದುಪ್ಪಟ್ಟು ಆಗಲಿ ಎಂದು ಆಶಿಸಿದರು.
ಪತ್ರಕರ್ತ ರಘು ಕೋಟಿ ಮಾತನಾಡಿ, ವಿದ್ಯಾರ್ಥಿಗಳೊಂದಿಗೆ ಹಾಡುತ್ತಾ, ಕುಣಿಯುತ್ತ ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಣವನ್ನು ನೀಡಬೇಕಿರುವುದು ಒಂದು ಸವಾಲಿನ ವಿಷಯ. ಅದನ್ನು ಇಲ್ಲಿಯ ಟೀಚರ್ ಗಳು ನಿರೀಕ್ಷೆಗೂ ಮೀರಿದ ಉತ್ತಮವಾಗಿ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಲೆಯ ಸಲಹಾ ಸಮಿತಿ ಸದಸ್ಯ ಡಾ.ರಾಮ್ ಭಟ್, ಶಾಲೆಯ ಆಡಳಿತಾಧಿಕಾರಿ ಸಿಸ್ಟರ್ ಅರ್ಪಿತಾ, ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಆಗ್ನೆಸ್, ಶಾಲೆಯ ಪ್ರತಿನಿಧಿ ಸಿಸ್ಟರ್ ಪ್ಲೋರೆಟ್, ಶಾಲೆಯ ಸಹಾಯಕ ಪ್ರತಿನಿಧಿ ಸಿಸ್ಟರ್ ಸೋಫಿಯಾ ಮೇರಿ, ಹಿರಿಯ ವಿದ್ಯಾರ್ಥಿಗಳಾದ ಆದರ್ಶ, ಗಣೇಶ, ಶಿಕ್ಷಕಿಯರಾದ ಭಾರತಿ, ಉಷಾ, ಸ್ಮಿತಾ, ದೈಹಿಕ ಶಿಕ್ಷಕ ಸಂತೋಷ್, ಜಾನಸನ್, ಡೀನಾ, ಕಾರ್ಲೋಸ್, ನಮ್ರತಾ ಮತ್ತಿತ್ತರು ಉಪಸ್ಥಿರಿದ್ದರು.
ಸ್ವಾಗತವನ್ನು ಸುನೀತಾ, ಧನ್ಯವಾದ ಸಮರ್ಪಿಸಿದವರು ಫಿಲೋಮಿನಾ.
ಅಕ್ಷತಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸಾಗರಿಕ ಎನ್ನುವ 7 ನೇ ತರಗತಿಯ ವಿಧ್ಯಾರ್ಥಿನಿ ಭಗವದ್ಗೀತೆಯ ಒಂದು ಶ್ಲೋಕವನ್ನು ಓದಿ, ಅದರ ಅರ್ಥವನ್ನು ಎಲ್ಲರಿಗೂ ಮನದಟ್ಟು ಮಾಡಿದರು. ಎಲ್ಲಾ ತರಗತಿಯ ಪ್ರತಿನಿಧಿಗಳು ಪ್ರಾರ್ಥನೆ ಮಾಡಿದರು.
ಕೊಡಗು ವೈಧ್ಯಕೀಯ ಕಾಲೇಜಿನ ಡಾ.ಚೇತನ್, ಡಾ.ಕಾವ್ಯ, ಕೊಡಗು ರಕ್ತನಿಧಿ ಕೇಂದ್ರದ ವೈದ್ಯ ಡಾ.ಕರುಂಬಯ್ಯ ಇದ್ದರು.
Back to top button
error: Content is protected !!