ಕುಶಾಲನಗರ, ಸೆ 02: ಕುಶಾಲನಗರದ ಬೈಚನಹಳ್ಳಿ ವಿವಿಧೆಡೆ ರೂ 35 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು.
ಬೈಚನಹಳ್ಳಿ ಸರಕಾರಿ ಶಾಲೆ ಸಮೀಪ ಮತ್ತು ಮಾರಮ್ಮ ದೇವಸ್ಥಾನ ಬಳಿ ಭೂಮಿಪೂಜೆ ನೆರವೇರಿಸಲಾಯಿತು.
ಈ ಸಂದರ್ಭ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಕುಡಾ ಅಧ್ಯಕ್ಷ ಪ್ರಮೋಧ ಮುತ್ತಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪ್ರಮುಖರಾದ ಶಿವಶಂಕರ್, ಶಿವಕುಮಾರ್, ಎಂ.ಎಂ.ಪ್ರಕಾಶ್, ಅಶೋಕ್, ಮಲ್ಲಿಕಾರ್ಜುನ, ಜಗದೀಶ್ ಮತ್ತಿತರರು ಇದ್ದರು.
Back to top button
error: Content is protected !!