ಕುಶಾಲನಗರ, ಜೂ 29: ಕುಶಾಲನಗರ ಲಯನ್ಸ್ ಕ್ಲಬ್ ನ ನೂತನ ಸಾಲಿನ ಅಧ್ಯಕ್ಷರಾಗಿ ಕೆ.ಎನ್. ಪವನ್ ಕುಮಾರ್, ಕಾರ್ಯದರ್ಶಿಯಾಗಿ ಎಂ.ಜಿ.ಕಿರಣ್, ಖಜಾಂಚಿಯಾಗಿ ಡಾ.ರಾಘವೇಂದ್ರ ಪಿ.ಸಿ. ಆಯ್ಕೆಯಾದರು.
ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಮಾಜಿ ಜಿಲ್ಲಾ ಗವರ್ನರ್ ಎಸ್.ಸಂಜಿತ್ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಈ ಸಂದರ್ಭ ವಲಯ ಅಧ್ಯಕ್ಷ ನಟರಾಜ್ ಕೆಸ್ತೂರು, ನೂತನ ಸಮಿತಿ
ಉಪಾಧ್ಯಕ್ಷ ನಿತಿನ್ ಎನ್ ಗುಪ್ತ, ನಿರ್ದೇಶಕರಾದ ಡಿ.ಎಸ್.ದಯಾನಂದ, ಹರೀಶ್ ಗಣಪತಿ, ವಿವೇಕ್, ರವಿ, ಕುಮಾರ್, ಮಾಜಿ ಅಧ್ಯಕ್ಷರುಗಳಾದ ಸಿ.ಆರ್.ನಾಗರಾಜು, ಕೊಡಗನ ಹರ್ಷ, ಕೆ.ಎಸ್.ಸತೀಶ್ ಕುಮಾರ್, ಟಿ.ಕೆ.ರಾಜಶೇಖರ್, ವಿ.ಎಸ್.ಸುಮನ್ ಬಾಲಚಂದ್ರ, ಡಾ.ಪ್ರವೀಣ್, ನಾರಾಯಣ ಮತ್ತಿತರರು ಇದ್ದರು. 
Back to top button
error: Content is protected !!