ಕಾರ್ಯಕ್ರಮ

ಕುಶಾಲನಗರ ರೋಟರಿ ಕ್ಲಬ್ ಪದಗ್ರಹಣ ಸಮಾರಂಭ: ನೂತನ ಅಧ್ಯಕ್ಷರಾಗಿ ರುದ್ರೇಶ್ ಪಾಟೀಲ್, ಕಾರ್ಯದರ್ಶಿಯಾಗಿ ಅರುಣ್ ಆಯ್ಕೆ

ಕುಶಾಲನಗರ, ಜೂ 26: : ರೋಟರಿ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯದೊಂದಿಗೆ ಸಮಾಜ ಸೇವೆಯಲ್ಲಿ ಮಾದರಿಯಾಗಿದೆ ಎಂದು ಹಿರಿಯ ರೋಟರಿ ಸದಸ್ಯ ಎಸ್.ಕೆ.ಸತೀಶ್ ಹೇಳಿದರು.

ಸಮೀಪದ ಅತ್ತೂರು ಆರ್ ಕ್ಯೂಬ್ ಸಭಾಂಗಣದಲ್ಲಿ
ಬುಧವಾರ ಏರ್ಪಡಿಸಿದ್ದ ಕುಶಾಲನಗರ ರೋಟರಿ ಸಂಸ್ಥೆ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು 2026-27ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ‌ ಅವರು ಮಾತನಾಡಿದರು.
ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಹೆಚ್ಚಿನ ಸದಸ್ಯರು ರೋಟರಿ ಸದಸ್ಯತ್ವವನ್ನು ಪಡೆದು ಸಾಮಾಜಿಕ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಸಂತೋಷ,ತೃಪ್ತಿಯನ್ನು ಹೊಂದಬೇಕು ಎಂದರು.
ರೋಟರಿ ಸಂಸ್ಥೆ ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಸುಮಾರು ರೂ.80 ಲಕ್ಷ ವೆಚ್ಚದಲ್ಲಿ ವಿವಿಧ ಸಾಮಾಜಿಕ ಸೇವ ಕಾರ್ಯಗಳನ್ನು ಮಾಡಿದೆ. ಭುವನಗಿರಿ ಗ್ರಾಮದಲ್ಲಿರುವ ಕಸ ಸಂಗ್ರಹ ಕೇಂದ್ರದಲ್ಲಿ ರೋಟರಿ ಸಂಸ್ಥೆಯು ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಹಸಿಕಸ ನಿರ್ವಹಣಾ ಘಟಕ ಸ್ಥಾಪನೆ ಮಾಡಿದ್ದು, ಎಸ್ಎಲ್ಎನ್ ಸಂಸ್ಥೆ ಸಿಎಸ್ಆರ್ ಫಂಡ್ ನಿಂದ ರೂ.15 ಲಕ್ಷ ನೀಡಿದೆ ಎಂದು ಹೇಳಿದರು.ಇದರ ಜೊತೆಗೆ ಹಳೆಯ ಸೇತುವೆ ಮೇಲೆ‌ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ.ಪಟ್ಟಣ ಸೇರಿದಂತೆ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಗೂ ಕಸ ಸಂಗ್ರಹ ಕ್ಕಾಗಿ ಬಾಟಲ್ ಮಾದರಿಯ ಕಸದ ತೊಟ್ಟಿಯನ್ನು ಅಳವಡಿಸಲಾಗಿದೆ ಎಂದರು.ಕಳೆದ ಸಾಲಿನ ಅಧ್ಯಕ್ಷ ಮನುಪೆಮ್ಮಯ್ಯ ಹಾಗೂ ಕಾರ್ಯದರ್ಶಿ ಮಂಜುನಾಥ್ ಅವರ ಸೇವೆ ಶ್ಲಾಘನೀಯ ಎಂದರು.
ನೂತನ ಸಹಾಯಕ ಗೌರ್ನರ್ ಎಂ.ಡಿ.ರಂಗಸ್ವಾಮಿ ಮಾತನಾಡಿ,ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ರೋಟರಿ ಉತ್ತಮ ವೇದಿಕೆಯಾಗಿದೆ. ರೋಟರಿ ವತಿಯಿಂದ ಹಮ್ಮಿಕೊಳ್ಳುವ ಸಾಮಾಜಿಕ ಸೇವಾ ಕಾರ್ಯಗಳಲ್ಲಿ‌ ಸಕ್ರೀಯವಾಗಿ ತೊಡಗಿಸಿಕೊಂಡು ಸಹಕಾರ ನೀಡಬೇಕು ಎಂದರು.
ಮಾಜಿ ಅಧ್ಯಕ್ಷ ಮನುಪೆಮ್ಮಯ್ಯ ಮಾತನಾಡಿ, ರೋಟರಿ ಸಂಸ್ಥೆ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಹಕಾರ ನೀಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.
ವಲಯ ಸೇನಾನಿ ಲಲಿತಾ ರಾಘವನ್, ರಾಕೇಶ್ ಪಾಟೇಲ್
ಮಾತನಾಡಿದರು.
ಈ ಸಂದರ್ಭ ಮಾಜಿ ಸಹಾಯಕ ಗೌರ್ನರ್ ಉಲ್ಲಾಸ್ ಕೃಷ್ಣ ,ಮಾಜಿ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್ ಉಪಸ್ಥಿತರಿದ್ದರು.
ಅಧಿಕಾರ ಸ್ವೀಕಾರ : ರೋಟರಿ ಸಂಸ್ಥೆ ನೂತನ ಅಧ್ಯಕ್ಷರಾಗಿ ರುದ್ರೇಶ್ ಪಾಟೀಲ್ ನೂತನ ಕಾರ್ಯದರ್ಶಿಯಾಗಿ ಅರುಣ್ ಅಧಿಕಾರ ವಹಿಸಿಕೊಂಡರು.
ನಿಕಟಪೂರ್ವ ಅಧ್ಯಕ್ಷ ಮನುಪೆಮ್ಮಯ್ಯ ನಿಕಟಪೂರ್ವ ಕಾರ್ಯದರ್ಶಿ ಮಂಜುನಾಥ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!