ಕೂಡಿಗೆ, ಮೇ 31: ಕೂಡಿಗೆಯ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶಾಲಾ ನೌಕರರ ರಘು ಹಾಗೂ ಶಾಲಾ ವ್ಯವಸ್ಥಾಪಕರಾದ ಮಂಡೆಪಂಡ ಬೋಸ್ ಮೊಣ್ಣಪ್ಪರವರಿಗೆ ಹಾಗೂ ಕ್ರೀಡಾ ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಶಾಲಾ ವಿಭಾಗದ ಹೆಚ್ಚು ಅಂಕಗಳನ್ನು ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳ ಸಾಧನೆಗೆ ಸನ್ಮಾನಿ ,ಗೌರವಿಸುವ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕ ಮಂಡೆಪಂಡ ಬೋಸ್ ಮೊಣ್ಣಪ್ಪ ವಹಿಸಿದರು.
ಶಾಲೆಯ ಗ್ರೂಪ್ ಡಿ. ನೌಕರರಾದ ಹೆಚ್.ಆರ್. ರಘು ರವರೆಗೆ ಫಲತಾಂಬುಲ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಎಸ್ .ಎಸ್. ಎಲ್. ಸಿ. ಪರೀಕ್ಷೆ ಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ಶರಾವತಿ ಹಾಗೂ ಪೋಷಕರಿಗೆ ಮತ್ತು ಕರ್ನಾಟಕ ರಾಜ್ಯ ಮಟ್ಟದ
ಕಾಯಕಯೋಗಿ ರತ್ನ ಪ್ರಶಸ್ತಿ ವಿಜೇತರಾದ ಮಂಡೆಪಂಡ ಬೋಸ್ ಮೊಣ್ಣಪ್ಪ ರವರಿಗೆ, ಕ್ರೀಡೆಯಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಶಾಲಾ ವಿದ್ಯಾರ್ಥಿಗಳಾದ ಪ್ರಜೇಶ್ ,ಮಣಿಕಂಠ, ಮುರಳಿ, ಹಾಗೂ ತರಬೇತುದಾರ, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಕುಮಾರ್ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಬಿ.ಪಿ. ಅಪ್ಪಣ್ಣ, ಕೆ ಸಿ ದೇವಯ್ಯ, ಅರುಣ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯನಿ ಎನ್. ಪುಷ್ಪ ಹಳೆಯ ವಿದ್ಯಾರ್ಥಿ ಚರಣ್, ಶಿಕ್ಷಕರಾದ ಎ.ಪಿ. ಸೋಮಯ್ಯ, ಎಂ.ಎಸ್. ಕುಸುಮ, ಟಿ .ಎಸ್. ಕಾಂತರಾಜ್, ಹೇಮಮಾಲಿನಿ, ಪ್ರತಾಪ್, ರೂಪಕಲಾ, ಗಣೇಶ್, ಕುಮಾರ್, ದೀಪಕ್, ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪುಷ್ಪ ಸ್ವಾಗತಿಸಿ ,ಎ.ಪಿ. ಸೋಮಯ್ಯ ವಂದಿಸಿದರು.
Back to top button
error: Content is protected !!