ಕಾರ್ಯಕ್ರಮ

ಕೂಡ್ಲೂರಿನಲ್ಲಿ ಬುದ್ಧ ಪೂರ್ಣಿಮೆ, ಕಾರ್ಮಿಕ ದಿನಾಚರಣೆ

ಕುಶಾಲನಗರ.ಮೇ‌ 2: ಸಚಿವ ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗ ವತಿಯಿಂದ
ಬುದ್ಧ ಪೂರ್ಣಿಮೆ ಹಾಗೂ ಕಾರ್ಮಿಕರ ದಿನಾಚರಣೆಯನ್ನು ಕೂಡ್ಲೂರಿನ ಖಾಸಗಿ ರೆಸಾರ್ಟ್‌ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹದೇವಪ್ಪ ಅಭಿಮಾನಿಗಳ ಬಳಗದ ಜಿಲ್ಲಾಧ್ಯಕ್ಷ ನಂದಕುಮಾರ್ ಮಾತನಾಡಿ, ಸಂಘಟನೆಯ ಮೂಲಕ ಮೂಲಭೂತ ಸೌಕರ್ಯಗಳನ್ನು ಪಡೆಯಲು ಸಹಕಾರವಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ, ಉದ್ಯಮಿ ನಾಪಂಡ ಮುತ್ತಪ್ಪ ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿ, ಕಾರ್ಮಿಕ ಸಂಘಟನೆ ಕಾರ್ಮಿಕರ ಬಲವರ್ಧನೆಗೆ ಪೂರಕವಾಗಿ ಕಾರ್ಮಿಕ ಸಂಘಟನೆ ಅತ್ಯುತ್ತಮವಾಗಿ ಬೆಳೆಯುವ ಮೂಲಕ ಸಂಘಟಿತರಾಗಲು ಸಹಕಾರಿಯಾಗುವುದು ಎಂದರು.
ಈ ಸಂದರ್ಭದಲ್ಲಿ
ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳ ಅಧ್ಯಕ್ಷ ಎಸ್‌.ಆರ್‌ ಅರುಣ್ ರಾವ್, ಉದ್ಯಮಿ , ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಜಿಲ್ಲಾ ಕಾಂಗ್ರೆಸ್ ನಿಕಟ ಪೂರ್ವ ಅಧ್ಯಕ್ಷ ಕೆ.ಕೆ.ಮಂಜುನಾಥ್, ಕಾಂಗ್ರೆಸ್ ಮುಖಂಡ ನಂದ ಕುಮಾರ್ ರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಜಿಲ್ಲಾ ವಕ್ತಾರ ಟಿ.ಈ. ಸುರೇಶ್, ಅಜ್ಜಳ್ಳಿ ರವಿ, ತ್ರಿನೇಶ್, ವಿಜಯಕುಮಾರ್, ರಾಜಪ್ಪ, ಹಾರೆ ಹೊಸೂರು ಕುಮಾರ್, ಶಂಕರ್, ಕಾಂತ್ ರಾಜ್, ಚೊಮಣ್ಣ, ಜಯಪ್ರಕಾಶ್, ಸುಬ್ರಹ್ಮಣ್ಯ, ರಘು, ಚಂದ್ರಶೇಖರ್, ಸೇರಿದಂತೆ ಇನ್ನೂ ಹಲವು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!