ಪ್ರಶಸ್ತಿ

ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಗೆ “ದ ಬೆಸ್ಟ್ ಪರ್ಫಾರ್ಮರ್ ಆಫ್ ನೋಬೆಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ಕುಶಾಲನಗರ, ಏ 27: ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು “ದ ಬೆಸ್ಟ್ ಪರ್ಫಾರ್ಮರ್ ಆಫ್ ನೋಬೆಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತರಾಗಿರುತ್ತಾರೆ.

ಇಂಡಿಯನ್ ಆರ್ಟ್ & ಕಲ್ಚರಲ್ ಫೆಡರೇಷನ್ (IACF) ವತಿಯಿಂದ ಬೆಂಗಳೂರಿನ ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಆಯೋಜಿಸಲಾಗಿದ್ದ ಸೌಥ್ ಇಂಡಿಯಾ ಬಿಗ್ಗೆಸ್ಟ್ ಡ್ಯಾನ್ಸ್ ಫೆಸ್ಟಿವಲ್ ನಲ್ಲಿ 10 ನಿಮಿಷಗಳ 25 ಶೈಲಿಗಳನ್ನು ಹೊಂದಿರುವ ತಡೆರಹಿತ ವೆಸ್ಟರ್ನ್ ನೃತ್ಯದಲ್ಲಿ ಕರ್ನಾಟಕ, ತಮಿಳುನಾಡು, ಆಂದ್ರಪದೇಶ ಮತ್ತು ಕೇರಳ ನಾಲ್ಕು ರಾಜ್ಯಗಳಿಂದ ಒಟ್ಟು 1000 ನೃತ್ಯ ಪಟುಗಳು ವೆಸ್ಟರ್ನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಅದರಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ಕೂಡಿಗೆಯ ಏಕೈಕ ತಂಡವಾಗಿ ಆಯ್ಕೆಗೊಂಡ ನೃತ್ಯ ಸಂಯೋಜಕ ಅಕ್ತರ್ ರವರ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ಒಟ್ಟು 18 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನಾಲ್ಕು ರಾಜ್ಯಗಳಿಂದ ಭಾಗವಹಿಸಿದ್ದ ತಂಡಗಳಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿದ್ದ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿದ್ಯಾರ್ಥಿಗಳು “ದ ಬೆಸ್ಟ್ ಪರ್ಫಾರ್ಮರ್ ಆಫ್ ನೋಬೆಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತರಾದರು.
ಈ ನೃತ್ಯ ಸ್ಪರ್ಧೆಯಲ್ಲಿ 10 ನಿಮಿಷಗಳ ವಿವಿಧ ರೀತಿಯ ಶೈಲಿ ಹೊಂದಿರುವ ವೆಸ್ಟರ್ನ್ ನೃತ್ಯದಲ್ಲಿ “ನೋಬೆಲ್ ಬುಕ್ ಆಫ್ ರೆಕಾರ್ಡ್ ಹೋಲ್ಡರ್ಸ್ 2026” ಪ್ರಶಸ್ತಿ ಕರ್ನಾಟಕದ ಎ ಕ್ರಿಯೇಟಿವ್ ತಂಡದ ನೃತ್ಯ ಪಟುಗಳು ತನ್ನ ಮುಡಿಗೇರಿಸಿಕೊಂಡರು.
ಇಂಡಿಯನ್ ಆರ್ಟ್ & ಕಲ್ಟರ್ ಫೆಡರೇಷನ್ (IACF) ವತಿಯಿಂದ ದಕ್ಷಿಣ ಭಾರತದಲ್ಲಿ ಉತ್ತಮ ಸಾಧನೆ, ಪ್ರಶಸ್ತಿ ಮತ್ತು ಹೆಚ್ಚಿನ ವೇದಿಕೆ ಅನುಭವ ಹೊಂದಿರುವ ನೃತ್ಯ ಸಂಸ್ಥೆ ಎಂದು ಗುರುತಿಸಿ ಕರ್ನಾಟಕದಿಂದ ಆಗಮಿಸಿದ್ದ ಕೊಡಗಿನ, ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ನೃತ್ಯ ಸಂಯೋಜಕ ಅಕ್ತರ್ ರವರಿಗೆ ಮಾಸ್ಟರ್ ಆಫ್ ಕಲ್ಚರಲ್ ಆರ್ಟ್ಸ್ M.C.A ಮತ್ತು ಫಿಟ್ ಇಂಡಿಯಾ ವತಿಯಿಂದ ಉತ್ತಮ ನೃತ್ಯ ಸಂಯೋಜಕ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ವತಿಯಿಂದ ವಿಶೇಷ ಅಥಿತಿ ನೃತ್ಯವನ್ನು ಉಳಿದ 4 ರಾಜ್ಯಗಳೊಂದಿಗೆ ಸ್ಪರ್ಧೆ ನಡೆಸಲಾಯಿತು. ಬಹಳ ಜಿದ್ದಾ ಜಿದ್ದಿಯ ಬ್ಯಾಟಲ್ ಸ್ಪರ್ಧೆಯಲ್ಲಿ ಎಲ್ಲರ ಮೈ ರೋಮಾಂಚನ ಗೊಳಿಸುವ ಶ್ರೀ ವಿಷ್ಣುವಿನ ನೃತ್ಯ ಪ್ರಕಾರವನ್ನು ಪ್ರಸ್ತುತ ಗೊಳಿಸಿದ ಕೊಡಗು ಜಿಲ್ಲೆಯ ಕೂಡಿಗೆಯ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಸ್ಥೆಯ ವಿಧ್ಯಾರ್ಥಿಗಳಿಗೆ ಆಯೋಜಕರು ಉತ್ತಮ ಗೌರವದೊಂದಿಗೆ “ಬೆಸ್ಟ್ ಪರ್ಫಾರ್ಮರ್” ವಿಜೇತ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!