ಕುಶಾಲನಗರ, ಸೆ 07: ದಿನಾಂಕ 07-09-2026ರಂದು ಹೆಬ್ಬಾಲೆ ಗ್ರಾಮದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಹಾಗೂ ರೇಬೀಸ್ ರೋಗ ತಡೆಗಟ್ಟಲು ಅಂತರ ಇಲಾಖೆ ಅಧಿಕಾರಿಗಳ ಮತ್ತು ಗ್ರಾಮದ ಮುಖಂಡರೊಂದಿಗೆ ವಿಶೇಷ ಸಭೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಾಲೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಬೀದಿ ನಾಯಿಗಳಿಗೆ ರೇಬೀಸ್ ಲಸಿಕೆ ಚುಚ್ಚುಮದ್ದು ಹಾಕಿಸುವುದರ ಬಗ್ಗೆ ಹಾಗೂ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸುವುದರ ಬಗ್ಗೆ ಚರ್ಚಿಸಲಾಯಿತು
ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಪರವಾಗಿ ಶಿರಂಗಾಲ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿಯವರಾದ ಡಾ ಉಜ್ಮಮಾ ಜಾಫರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಯಾದ ಶಾಂತಿ, ಹೆಬ್ಬಾಲೆ ಪಶು ಆಸ್ಪತ್ರೆಯ ಪಶು ವೈದ್ಯರಾದ ಡಾ ಅಮೃತಾ, ಹೆಬ್ಬಾಲೆ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಕುಮಾರ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಣಿ ವೆಂಕಟೇಶ್, ಮಂಜುನಾಥ, ರವಿ ಹಾಗೂ ಹೆಬ್ಬಾಲೆ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕರಾದ ಸಂಜಯ್, ಮೇಲ್ವಿಚಾರಕರಾದ ನಾಗೇಂದ್ರಚಾರಿ, ಲತಾ ಕುಮಾರಿ, ಹಾಜರಿದ್ದರು.
Back to top button
error: Content is protected !!