ಕುಶಾಲನಗರ, ಮಾ 18: ಮಂಗಳವಾರ ಕುಶಾಲನಗರದಲ್ಲಿ ಅಡಿಗೆ ಅನಿಲ ಬೆಲೆ ಏರಿಕೆ ಕುರಿತು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯ ಬಗ್ಗೆ ಮಾತನಾಡಿದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಭಾಸ್ಕರ್ ನಾಯಕ್ ರವರು ಬೆಲೆ ಏರಿಕೆ ಕುರಿತು ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದು ಟೀಕೆ ಮಾಡಿದ್ದಾರೆ. ಗ್ಯಾರೆಂಟಿ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇಂದು ಪ್ರತಿ ಅಗತ್ಯ ವಸ್ತುಗಳಿಗೂ ಬೆಲೆ ಏರಿಕೆ ಮಾಡಿದೆ, ಚುನಾವಣೆಗಾಗಿ ಗ್ಯಾರೆಂಟಿ ಘೋಷಿಸಿ ಈಗ ಅದನ್ನು ಸಮರ್ಪಕವಾಗಿ ನಿರ್ವಹಿಸಲಾಗದೆ ರಾಜ್ಯ ಜನತೆಯ ಮೇಲೆ ಬೆಲೆ ಏರಿಕೆಯನ್ನು ಹೇರಿ ರಾಜ್ಯದ ಜನತೆಯ ಭವಿಷ್ಯವನ್ನು ಅಡವಿಟ್ಟಿದ್ದಾರೆ ಬಿಜೆಪಿ ಬಗ್ಗೆ ಬೆಲೆ ಏರಿಕೆ ಕುರಿತು ಮಾತನಾಡುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹಾಲಿನ ದರವನ್ನು ಇದುವರೆಗೂ 35 ರಿಂದ 40% ಹೆಚ್ಚಳ ಮಾಡಿದೆ,ಪೆಟ್ರೋಲ್ ದರ 3₹, ಡೀಸೆಲ್ ದರ 5.2 ₹ ಹೆಚ್ಚಳ, ಬಸ್ ಪ್ರಯಾಣಿಕರ ದರ 15% ಹೆಚ್ಚಳ, ವಾಹನಗಳ ನೋಂದಾವಣೆ ಶುಲ್ಕ ಹೆಚ್ಚಳ,ವಿದ್ಯುತ್ ಚಾಲಿತ ವಾಹನಗಳಿಗೆ 15% ತೆರಿಗೆ ಹೆಚ್ಚಳ, ಕಾವೇರಿ ಕುಡಿಯುವ ನೀರಿನ ದರದ ಮೇಲೆ 30% ಹೆಚ್ಚಳ, ಒಳಚರಂಡಿ ದಂಡದ ಮೇಲೆ 25% ಹೆಚ್ಚಳ, ಮಧ್ಯದ ದರದ ಮೇಲೆ 10 ರಿಂದ 20% ಹೆಚ್ಚಳ, ಮದ್ಯದ ಲೈಸನ್ಸ್ ಶುಲ್ಕದ ಮೇಲೆ 50% ಹೆಚ್ಚಳ, ವಿದ್ಯುತ್ ದರದ ಮೇಲೆ ಹೆಚ್ಚಳ, ಮೆಟ್ರೋ ಪ್ರಯಾಣ ದರದ ಮೇಲೆ ಹೆಚ್ಚಳ, ಆಸ್ತಿಗಳ ಮಾರ್ಗಸೂಚಿ ದರದ ಮೇಲೆ ಹೆಚ್ಚಳ, ಸ್ಟಾಂಪ್ ಡ್ಯೂಟಿ ಹೆಚ್ಚಳ, ವೃತ್ತಿ ತೆರಿಗೆ ಹೆಚ್ಚಳ,ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಶುಲ್ಕ ಹೆಚ್ಚಳ, ಸರ್ಕಾರಿ ಆಸ್ಪತ್ರೆಗಳ ಸೇವಾ ಶುಲ್ಕ ಹೆಚ್ಚಳ, ಮೃಗಾಲಯಗಳ ಪ್ರವೇಶ ಶುಲ್ಕ ಹೆಚ್ಚಳ, ಕಾರ್ಮಿಕ ಕಲ್ಯಾಣ ನಿಧಿಗಳ ಶುಲ್ಕ ಹೆಚ್ಚಳ ಹೀಗೆ ಸಿಕ್ಕಿದ ಎಲ್ಲಾದಕ್ಕೂ ಶುಲ್ಕವನ್ನು ಹೆಚ್ಚಳ ಮಾಡಿದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ನಮ್ಮ ರಾಜ್ಯದ ಜನಸಾಮಾನ್ಯರು ಬೇಸತ್ತು ಹೋಗಿ ಬೀದಿಗಿಳಿದು ಪ್ರತಿಭಟನೆ ಮಾಡಲು ಹೊರಟಿರುವ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಕೇಂದ್ರ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸುವುದನ್ನು ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದ ಹಾಗೆ ಇದೆ ಎಂದು ಟೀಕಿಸಿದರು. ಅಡುಗೆ ಅನಿಲ ಕೊರತೆ ಇದೆ ಎಂದು ಬಾಯಿ ಬಡಿಯುವ ಮುಖಾಂತರ ಕಾಂಗ್ರೆಸ್ಸಿಗರು ಜನಸಾಮಾನ್ಯರನ್ನು ದಾರಿ ತಪ್ಪಿಸುವಂಥ ಕೆಲಸವನ್ನು ಮಾಡುತ್ತಿದ್ದಾರೆ, ಮೊನ್ನೆಯಷ್ಟೇ ಮಂಗಳೂರಿನ ಬಂದರಿಗೆ (NMPT) ‘ಶಿವಾಲಿಕ್’ ಎಲ್ಪಿಜಿ ಟ್ಯಾಂಕರ್ ಸುರಕ್ಷಿತವಾಗಿ ಆಗಮಿಸಿದೆ, ಜಾಗತಿಕ ಉದ್ವಿಗ್ನತೆಯ ನಡುವೆಯೂ ಹಾರ್ಮೋಜ್ ಜಲಸಂದಿ ದಾಟಿ ಬಂದಿರುವ ಈ ಹಡಗು ಅಡುಗೆ ಅನಿಲವನ್ನು ಅನ್ ಲೋಡ್ ಮಾಡುತ್ತಿದೆ ಇದರಿಂದ ಕರ್ನಾಟಕ ಸೇರಿದಂತೆ ನೆರೆ ರಾಜ್ಯಗಳಲ್ಲಿ ಎಲ್ ಪಿ ಜಿ ಕೊರತೆ ಭೀತಿ ದೂರವಾಗಿದ್ದು ಇಂಧನ ಭದ್ರತೆ ಕಾಪಾಡುವಲ್ಲಿ ದೇಶ ಯಶಸ್ವಿಯಾಗಿದೆ, ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಎಲ್ಲವೂ ಸಾಧ್ಯ ಎಂದು ತಿಳಿಸಿದರು.
Back to top button
error: Content is protected !!