ಕುಶಾಲನಗರ, ಫೆ 26:ಕರ್ನಾಟಕದಲ್ಲಿ ಅಧಿಕೃತ ಆಡಳಿತ ಭಾಷೆಯಾದ ಕನ್ನಡವನ್ನೇ ರಾಜ್ಯ ಸರಕಾರದ ಆರೋಗ್ಯ ಮಂತ್ರಿ ನಿರ್ಲಕ್ಷಿಸಿ ಉರ್ದು ಭಾಷೆಯಲ್ಲಿ ಆಹ್ವಾನ ಪತ್ರಿಕೆ ಮುದ್ರಿಸಿರುವ ಆರೋಗ್ಯ ಸಚಿವರ ನಡೆಯನ್ನು ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾಧ್ಯಕ್ಷ ಡಾ.ಬಿ.ಎ.ದಿನೇಶ್ ಶೆಟ್ಟಿ ಖಂಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಅಧಿಕೃತ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಉರ್ದುವಿನಲ್ಲಿ ಪ್ರಕಟಿಸಿರುವುದು ಕನ್ನಡ ಭಾಷೆಗೆ ಮಾಡಿದ ಅವಮಾನ ಎಂದಿದ್ದಾರೆ. ಯಾವುದೋ ಒಂದು ಸಮುದಾಯದ ಓಲೈಕೆಗೆ ಈ ರೀತಿ ವರ್ತಿಸುವುದು ಸರಿಯಲ್ಲ. ಜವಬ್ದಾರಿ ಸ್ಥಾನದಲ್ಲಿರುವುವರ ಜನರ ದಿಕ್ಕು ತಪ್ಪಿಸಬಾರದು, ಹೊಸ ಸಂಸ್ಕೃತಿಗೆ ಅವಕಾಶ ಕಲ್ಪಿಸಬಾರದು. ಇತರೆ ಭಾಷೆಯ ಪ್ರೇಮ ಮನಸ್ಸಿನಲ್ಲಿ, ಮನೆಯಲ್ಲಿರಲಿ. ರಾಜ್ಯದ ವಿಚಾರದಲ್ಲಿ ಸದಾ ಕನ್ನಡಕ್ಕೆ ಮನ್ನಣೆ ನೀಡುವ ಜವಬ್ದಾರಿ ಸಚಿವರು ಹಾಗೂ ಸರಕಾರದ ಮೇಲಿದೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Back to top button
error: Content is protected !!