ಕುಶಾಲನಗರ, ಜ 31: ಕುಶಾಲನಗರ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಸಂಘದ ಕಟ್ಟಡದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಕೆ .ಎಸ್. ರಾಜಶೇಖರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಆರಂಭದಲ್ಲಿ ಸಂಘದ ನಿರ್ದೇಶಕ ಶ್ರೀಹರ್ಷ ಕಳೆದ ವಾರ್ಷಿಕ ಸಾಲಿನ ವರದಿಯನ್ನೋದಿದರೆ ಖಜಾಂಚಿ ಶ್ರೀದೇವಿ ವೆಂಕಟರಮಣರಾವ್ ಲೆಕ್ಕಪತ್ರ ವರದಿ ಮಂಡಿಸಿದರು.
ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ದಿ. ಆರ್. ಗುಂಡೂರಾಯರಿಂದ ಸಂಘಕ್ಕೆ ದಾನವಾಗಿ ನೀಡಲ್ಪಟ್ಟ ಕಟ್ಟಡದ ಸ್ವಾಯತ್ತತೆ ಹಾಗೂ ಪುನರ್ ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆ ನಡೆದು ವಕೀಲ ನಾಗೇಂದ್ರ ಬಾಬು ಮತ್ತು ಮಂಜುನಾಥ ಗುಂಡೂರಾವ್ ರವರ ಜಂಟಿ ಪ್ರಯತ್ನದಿಂದ ಹೊಸ ಕಟ್ಟಡಕ್ಕೆ ಅನುಮತಿ ದೊರಕಿಸುವಂತೆಯೂ ,ಆ ನಂತರ ಶಾಸಕರ ವಾಗ್ದಾನದ ಮೊತ್ತವನ್ನು ಒಳಗೊಂಡಂತೆ ಉಳಿದ ಹಣವನ್ನು ಕ್ರೋಢೀಕರಿಸಿ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ದಿ. ಗುಂಡೂರಾವ್ ರವರ ಪುತ್ರ ಮಹೇಶ್ ಗುಂಡೂರಾವ್ ರ ಆಶಯದಂತೆ ಕಟ್ಟಡ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಕಾನೂನು ಬದ್ಧತೆಯನ್ನು ಕಾಯ್ದುಕೊಳ್ಳುವಂತೆ ಅಭಿಪ್ರಾಯಿಸಲಾಯಿತು. ಸಮುದಾಯದಲ್ಲಿ ಗಣ್ಯರಾಗಿ ಗುರುತಿಸಿಕೊಂಡ ನಿರೂಪಕ ಹಾಗೂ ವಾಕ್ಚತುರ , ನಿವೃತ್ತ ಕಲಾ ಶಿಕ್ಷಕ ಉ. ರಾ. ನಾಗೇಶ್, ಸಂಘದ ಮಾಜಿ ಅಧ್ಯಕ್ಷ ವಿಜಯೇಂದ್ರ ಮತ್ತು ಸಂಘದ ಕಾನೂನು ಸಲಹೆಗಾರ ಕೆ .ಎಸ್ .ವೆಂಕಟರಮಣ ರಾವ್ ರನ್ನು ದಂಪತಿ ಸಮೇತ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಂಟನೇ ತರಗತಿ, ಪಿಯುಸಿ ಎರಡನೇ ವರ್ಷ ಮತ್ತು ನಂತರದ ಉನ್ನತ ಶಿಕ್ಷಣ ಪಡೆಯುವ ಅರ್ಹ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡಲಾಯಿತು.
ವೇದಿಕೆಯಲ್ಲಿ ಉಪಾಧ್ಯಕ್ಷ ಕೆ .ಕೆ .ಸುಬ್ಬರಾಮು, ಕಾರ್ಯದರ್ಶಿ ಅನಿಲ್ ಕೆದಿರಾಯ, ಖಜಾಂಚಿ ಶ್ರೀದೇವಿ ವೆಂಕಟರಮಣರಾವ್, ನಿರ್ದೇಶಕಿಯರಾದ ರಜನಿ ಪ್ರದೀಪ್, ಶರ್ಮಿಳಾ ಮಂಜುನಾಥ ಗುಂಡೂರಾವ್, ನಿರ್ದೇಶಕರುಗಳಾದ ಎಂ. ವಿ. ನಾರಾಯಣ, ಬಿ. .ಆರ್. ರಾಜೀವ, ಶಶಿಧರ್, ಸತೀಶ್, ಶ್ರೀ ಹರ್ಷ, ಮಾಜಿ ಅಧ್ಯಕ್ಷರಾದ ಬಿ. ಎಸ್. ರಾಧಾಕೃಷ್ಣ ಉಪಸ್ಥಿತರಿದ್ದರು.
Back to top button
error: Content is protected !!