ಕುಶಾಲನಗರ, ಜ 31:
ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಂತರ ಪಾಲಿಟೆಕ್ನಿಕ್ ಭಾವಗೀತೆ ಸ್ಪರ್ಧೆ ನಡೆಯಿತು.
ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘ, ಮತ್ತು ಸರಕಾರಿ ಪಾಲಿಟೆಕ್ನಿಕ್ ಕುಶಾಲನಗರ ಆಶ್ರಯದಲ್ಲಿ ನಡೆದ ಪಾರ್ವತಮ್ಮ ಸ್ಮಾರಕ ಸ್ಪರ್ಧಾ ಕಾರ್ಯಕ್ರಮವನ್ನು ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಹೆಚ್ ವಿ ಶಿವಪ್ಪ ಅವರು ಉದ್ಘಾಟಿಸಿ ಶುಭ ಕೋರಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಮಂಜುನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮಾಜಿ ಅಧ್ಯಕ್ಷರಾದ ಲೋಕೇಶ್ ಸಾಗರ್, ಕಾಲೇಜಿನ ಹಿರಿಯ ವಿದ್ಯಾರ್ಥಿ ಎಂ ಎನ್ ಚಂದ್ರಮೋಹನ್, ನಿವೃತ್ತ ಅಧಿಕಾರಿ ರಾಮ ಶೆಟ್ಟಿ, ಕಾರ್ಯಕ್ರಮ ಪ್ರಾಯೋಜಕರಾದ ಹಿರಿಯ ಪತ್ರಕರ್ತರಾದ ಮುರಳಿಧರ್ ಕಾಲೇಜಿನ ಕುಲಸಚಿವರಾದ ಮೇರಿ ಮತ್ತಿತರರು ಇದ್ದರು.
ಮೈಸೂರು ಕೆಆರ್ ಪೇಟೆ ಮತ್ತಿತರ ನಾಲ್ಕು ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಂದ ಭಾವಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮ ಸಂಯೋಜಕರಾದ ಉಪನ್ಯಾಸಕರು ಸ್ಮಿತಾ ಮೋಹನ್ ಅವರು ಕಾರ್ಯಕ್ರಮ ನಡೆಸಿಕೊಟ್ಟರು.
ಉಪನ್ಯಾಸಕರಾದ ಜಯಣ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Back to top button
error: Content is protected !!