ಕುಶಾಲನಗರ, ಜು 10: ಲಾರಿ ಹರಿದು ವ್ಯಕ್ತಿ ಮೃತಪಟ್ಟ ಘಟನೆ ಗುಡ್ಡೆಹೊಸೂರಿನಲ್ಲಿ ನಡೆದಿದೆ.
ನಾಪೊಕ್ಲು ಕೊಟ್ಟಾಮುಡಿ ಗ್ರಾಮದ ಅಬ್ದುಲ್ ಸಲಾಂ ಮೃತ ವ್ಯಕ್ತಿ.
ಗುರುವಾರ ಬೆಳಗಿನ ಜಾವ ಮೈಸೂರಿನತ್ತ ತೆರಳುತ್ತಿದ್ದ ಲಾರಿ ಮೃತನ ತಲೆ ಮೇಲೆ ಹರಿದಿದೆ. ಮೃತ ಅಬ್ದುಲ್ ಮಾನಸಿಕ ಅಸ್ವಸ್ಥನಂತೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ರಾತ್ರಿ ಹೆದ್ದಾರಿ ಅಂಚಿನಲ್ಲಿ ರಸ್ತೆಗೆ ತಲೆಹಾಕಿ ಮಲಗಿದ್ದ ಈತನ ಮೇಲೆ ಲಾರಿ ಹರಿದ ಪರಿಣಾಮ ಮೃತಪಟ್ಡಿದ್ದಾನೆ. ಕುಶಾಲನಗರ ಸಂಚಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Back to top button
error: Content is protected !!