ಕ್ರೀಡೆ

ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ‌ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಕುಶಾಲನಗರ, ಜ 25: ನಂಜರಾಯಪಟ್ಟಣ ಸ.ಮಾ.ಪ್ರಾ ಶಾಲೆಯಲ್ಲಿ 2025-26ನೇ ಸಾಲಿನ ಗ್ರಾಮೀಣ ಕ್ರೀಡಾಕೂಟ‌ ಮತ್ತು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು.

ನಿವೃತ್ತ ಸೈನಿಕ ಬಿ.ಎಸ್.ಮುಸ್ತಾಫ ಕ್ರೀಡಾಜ್ಯೋತಿ ಬೆಳಗಿಸಿ‌ದರು.

ಹಳೆ ವಿದ್ಯಾರ್ಥಿಗಳಾದ ಟಿ.ಕೆ.ಸೋಮನ್ ಮತ್ತು ಟಿ.ಕೆ. ರಘು ಅವರು ಮೇಲಾಟಗಳಿಗೆ ಚಾಲನೆ ನೀಡಿದರು.

ಗ್ರಾಮಪಂಚಾಯ್ತಿ‌ ಮಾಜಿ ಉಪಾಧ್ಯಕ್ಷ ಕೆ.ವಿ.ಪ್ರೇಮಾನಂದ ಮಾತನಾಡಿದರು.

ವಿದ್ಯಾರ್ಥಿಗಳ ಪಥಸಂಚಲನ‌ ಬಳಿಕ ಕ್ರೀಡಾ
ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಈ ಸಂದರ್ಭ ನಂಜರಾಯಪಟ್ಟಣ ಗ್ರಾಪಂ ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ರಕ್ಷಿತ್ ಮಾವಜಿ, ಎಸ್.ಡಿ.ಎಂ.ಸಿ.ಅಧ್ಯಕ್ಷೆ ಶೃತಿ ಶ್ರೀನಿವಾಸನ್,‌ಮುಖ್ಯ ಶಿಕ್ಷಕಿ ಸರಳಾ ರಾಣಿ,
ಹಳೆ ವಿದ್ಯಾರ್ಥಿಗಳಾದ
ಕಾಳಯ್ಯ, ರವಿ ಬೆಳ್ಯಪ್ಪ, ದುಬಾರೆ ರಾಫ್ಟ್ ಮತ್ತು ಗೈಡ್ ಅಸೋಸಿಯೇಷನ್ ಅಧ್ಯಕ್ಷ, ಶರತ್, ದಾನಿಗಳಾದ ಗಣಪತಿ, ಅಮೀರ್, ಸೈನಿಕ ತಿಲಕ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮ್ಯಾಥ್ಯು, ಖಜಾಂಚಿ
ಹ್ಯಾರಿಸ್ ಸೇರಿದಂತೆ ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಶಿಕ್ಷಕ ವೃಂದದವರು, ಪೋಷಕರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!