ಕಾರ್ಯಕ್ರಮ
ಕುಶಾಲನಗರದಲ್ಲಿ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ

ಕುಶಾಲನಗರ, ಜ 25: ಕುಶಾಲನಗರದಲ್ಲಿ ಹಿಂದೂ ಸಂಗಮ ಅಯೋಜನಾ ಸಮಿತಿ ವತಿಯಿಂದ ಹಿಂದೂ ಸಂಗಮ ಬೃಹತ್ ಶೋಭಾಯಾತ್ರೆ ನಡೆಯಿತು.
ಕುಶಾಲನಗರದ ಎಂಜಿಎಂ ಕಾಲೇಜು ಬಳಿಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಹಿಂದೂ ಮುಖಂಡ ಜಿ.ಎಲ್.ನಾಗರಾಜ್ ಚಾಲನೆ ನೀಡಿದರು.
ಕನ್ನಡಾಂಭೆಯ ಭಾವಚಿತ್ರ ಒಳಗೊಂಡ ವಾಹನ ಜೊತೆಯಲ್ಲಿ ಚಂಡೆ ವಾದ್ಯ ಸಮ್ಮುಖದಲ್ಲಿ ಕೇಸರಿ ಧ್ವಜ ಹಿಡಿದು ಸಾವಿರಾರು ಸಂಖ್ಯೆಯಲ್ಲಿ ಸಾಗಿಬಂದ ಹಿಂದೂ ಬಾಂಧವರು ಧರ್ಮ ಪರ ಘೋಷಣೆಗಳನ್ನು ಮೊಳಗಿಸಿದರು.



