ಪ್ರಕಟಣೆ

ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಹೆಬ್ಬಾಲೆ ಕ್ಷೇತ್ರದಿಂದ ಯುವಮುಖಂಡ ಶರತ್ ಕುಮಾರ್ HJ ಆಕಾಂಕ್ಷಿ

ಕುಶಾಲನಗರ, ಜ 18: ಹೆಬ್ಬಾಲೆ ಗ್ರಾಮದ ಶರತ್ ಕುಮಾರ್ ಎಚ್ ಜೆ ಅವರು ಮುಂಬರುವ ಜಿಪಂ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೆಬ್ಬಾಲೆ ಕ್ಷೇತ್ರದಲ್ಲಿ ಕಣಕ್ಕಿಳಿಯಲಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಮತ್ತು ಬಿಎಡ್ ಪದವಿಯನ್ನು ಪಡೆದು. ಮೆಣಸಿನಕಾಯಿ ಮತ್ತು ಶುಂಠಿ ವ್ಯಾಪಾರಿಗಳಾಗಿ ಅಪಾರ ರೈತಾಪಿ ವರ್ಗದವರನ್ನು ಪಡೆದು ಹೆಸರು ಮಾಡಿದ್ದಾರೆ.

2023ರಲ್ಲಿ ನಡೆದ ಹೆಬ್ಬಾಲೆಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಅಧಿಕ ಮತಗಳನ್ನು ಪಡೆದು ಅತಿ ಕಿರಿಯ ಯುವಕನಾಗಿ ಜಯಶಾಲಿಯಾಗಿದ್ದಾರೆ
2025 ರಲ್ಲಿ ನಡೆದ ಕುಶಾಲನಗರದ ಎಪಿಎಂಸಿಯ ನಿರ್ದೇಶಕರ ಚುನಾವಣೆಯಲ್ಲೂ ಗೆಲುವಿನ ನಗೆ ಬೀರಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿದ್ದ ಮೈಸೂರಿನ ಮಹಾರಾಜ ಯದುವೀರ್ ಅವರ ಗೆಲುವಿಗೆ ಸಾಕಷ್ಟು ಪರಿಶ್ರಮವನ್ನು ಹೊಂದಿದ್ದಾರೆ.
ಸಕ್ರಿಯವಾಗಿ ಜೆಡಿಎಸ್ ಪಕ್ಷ ಬಿಜೆಪಿಯಲ್ಲೂ ಗುರುತಿಸಿಕೊಂಡಿರುವ ವಿದ್ಯಾವಂತರಾದ ಶರತ್ ಕುಮಾರ್ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹೆಬ್ಬಾಲೆ ಕ್ಷೇತ್ರದ ಆಕಾಂಕ್ಷಿಯಾಗಿ ಕಾಲಿಗೆ ಚಕ್ರ ಕಟ್ಟಿ . ಹೆಬ್ಬಾಲೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಿಗೂ ಭೇಟಿಕೊಟ್ಟು ಯುವಕರ ಕಣ್ಮಣಿಯಾಗಿ ಎಲ್ಲಾ ಸಮುದಾಯದ ಯುವ ನಾಯಕನಾಗಿ ಪ್ರತಿಯೊಂದು ದೇವಸ್ಥಾನಗಳಿಗೆ. ಹಬ್ಬ . ಜಾತ್ರೆ. ಗಣೇಶ ಉತ್ಸವ ಕಾರ್ಯಕ್ರಮಗಳಿಗೆ ತನ್ನ ತನು ಮನದಿಂದ ದೇಣಿಗೆಯನ್ನು ನೀಡುತ್ತಾ ಬರುತ್ತಿದ್ದಾರೆ.
ಹೆಬ್ಬಾಲೆ ಕ್ಷೇತ್ರದ ಯುವಕರು ಮತ್ತು ಹಿರಿಯರು ಎಲ್ಲ ಸಮಾಜದ ಹಿತೈಷಿಗಳಾಗಿ ಎಲ್ಲರ ನಾಡಿಮಿಡಿತ ಬಲ್ಲವರಾಗಿದ್ದು ಜೊತೆಗೆ ಕೊಡಗು ಜಿಲ್ಲೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲೆ ಅಧ್ಯಕ್ಷರಾಗಿ ರೈತಪರ ಸಾಮಾಜಿಕ ಪರ ಹೋರಾಟಗಳನ್ನು ಮಾಡಿ. ಬೆಳಗಾವಿ ಚಲೋ . ಬೆಂಗಳೂರು ವಿಧಾನಸೌಧ ಛಲೋ ದಲ್ಲಿ ಪಾಲ್ಗೊಂಡು ರೈತ ಪರ ಹೋರಾಟದಲ್ಲಿ ಕಣ್ಮಣಿಯಾಗಿ ಹೆಸರು ಮಾಡಿದ್ದಾರೆ
ಹೆಬ್ಬಾಲೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲ ಸಮುದಾಯದವರು ಸಹ ಈ ಯುವ ಮುಖಂಡರಿಗೆ ಒಲವನ್ನ ಕೊಟ್ಟು ಬರುತ್ತಿದ್ದಾರೆ . ಹಿರಿಯ ಮುಖಂಡರು ಸಹ ಒಮ್ಮತಿ ಸೂಚಿಸಿದ್ದು. ಜೊತೆ ಬಡವರಿಗೆ ತನ್ನ ಕೈಲಾದಷ್ಟು ಧನಸಹಾಯವನ್ನು ಮಾಡುತ್ತಾ ನಿರಂತರವಾಗಿ ಜನ ಸಂಪರ್ಕದಲ್ಲಿ ಹೆಬ್ಬಾಲೆಯಲ್ಲಿ ವಾಸವಾಗಿರುವ ಶರತ್ ಕುಮಾರ್ ಜನನಾಯಕರಾಗಿ ಬೆಳೆದು ನಿಂತಿದ್ದಾರೆ.
ಬಿಜೆಪಿ ಪಕ್ಷದಿಂದ ಟಿಕೆಟ್ ಪಡೆದು ಶತಾಯಗತಾಯವಾಗಿ ಕಾಲಿಗೆ ಚಕ್ರಕಟ್ಟಿ ಗೆಲುವಿನ ನಗೆ ಬೀರು ಬೇಕೆಂದು ಉತ್ಸಹಿಯಾಗಿ ಇವರ ಹಿಂಬಾಲಕರಾಗಿ ಯುವಕರು ಗೆಲುವಿಗೆ ಶತಸಿದ್ಧ ಅಂತ ಹೇಳಿ ನಿಂತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!