ಕುಶಾಲನಗರ, ಜ 13 : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಮಂಗಳವಾರ ಕೊಡಗು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಭೇಟಿ ಮಾಡುವ ಮೂಲಕ ಹೂ ಗುಚ್ಛ ನೀಡಿ ಸ್ವಾಗತಿಸಿ ಯೋಧರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಕೋರಲಾಯಿತು.
ಕೊಡಗು ಜಿಲ್ಲೆಯಲ್ಲಿ ಹಾಲೀ ಕರ್ತವ್ಯದಲ್ಲಿ ಇರುವ ಮತ್ತು ಈಗಾಗಲೇ ಕರ್ತವ್ಯ ಗೈದು ನಿವೃತ್ತಿ ಹೊಂದಿರುವ ಯೋಧರ ಸಂಖ್ಯೆ ಸುಮಾರು 5 ಸಾವಿರದಷ್ಟಿದ್ದು, ಇದೂವರೆಗೂ ಯೋಧರ ಹಿತರಕ್ಷಣೆಗಾಗಿ ಸ್ವಂತದ್ದಾದ ಸಂಘದ ಜಾಗವನ್ನು ಕೂಡ ಹೊಂದಲು ಸಾಧ್ಯವಾಗಿಲ್ಲ.
ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಛೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದೇವೆ.
ಈಗಾಗಲೇ ಮೃತ ಯೋಧರ ಪತ್ನಿಯರು ಹಾಗೂ ಕುಟುಂಬ ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಆ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ.
ಹಾಗಾಗಿ ಕುಶಾಲನಗರದ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ನಾವುಗಳು ಈಗಾಗಲೇ 60 ಸೆಂಟಿಗಳಷ್ಟು ಸರ್ಕಾರದ ಜಾಗವನ್ನು ಗುರುತಿಸಿದ್ದು
ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ.
ಆದ್ದರಿಂದ ತಾವುಗಳು ಕುಶಾಲನಗರಕ್ಕೆ ಆಗಮಿಸಿ ಖುದ್ದಾಗಿ ಸ್ಥಳ ಪರಿಶೀಲಿಸಿ ನಮಗೆ ಆ ಭೂಮಿಯನ್ನು ಮಂಜೂರಾತಿ ಮಾಡಿಕೊಡಬೇಕೆಂದು ಸಂಘದ ವತಿಯಿಂದ ಕೋರಲಾಯಿತು.
ಈ ಸಂದರ್ಭ ಒಕ್ಕೂಟದ ಉಪಾಧ್ಯಕ್ಷರಾದ ಪುಲಿಯಂಡ.ಎಂ.ಚಂಗಪ್ಪ, ನಿರ್ದೇಶಕರಾದ ಹರೀಶ್ ಕುಮಾರ್, ಜಿ.ಕೆ. ದಿನೇಶ್ ಕುಮಾರ್, ಬಿ.ಯು.ಲೋಕೇಶ್, ಎನ್.ಎಂ.ಭೀಮಯ್ಯ ಮತ್ತು ಡಿ.ಎಸ್. ನಳಿನಿ ಕುಮಾರಿ ಇದ್ದರು.
Back to top button
error: Content is protected !!