ಕಾರ್ಯಕ್ರಮ

ಕುಶಾಲನಗರ ಕುವೆಂಪು ಬಡಾವಣೆಯಲ್ಲಿ ವಾರ್ಷಿಕೋತ್ಸವ

ಕುಶಾಲನಗರ, ಜ 11: : ಇಲ್ಲಿನ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯ ಕುವೆಂಪು ಬಡಾವಣೆಯ ಹಿತರಕ್ಷಣಾ ವೇದಿಕೆಯ ವಾರ್ಷಿಕೋತ್ಸವ ಸಮಾರಂಭ ಭಾನುವಾರ ಬಡಾವಣೆಯ ಉದ್ಯಾನವನದಲ್ಲಿ ನಡೆಯಿತು.
ಬಡಾವಣೆಯ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಕೆ.ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಅಧ್ಯಕ್ಷ ದಯಾನಂದ ಕುವೆಂಪು ಬಡಾವಣೆಯಲ್ಲಿ 90 ಮನೆಗಳಿದ್ದು ಎಲ್ಲಾ ಸಮುದಾಯದವರು ಒಗ್ಗಟ್ಟಿನಿಂದ ಇದ್ದೇವೆ. ಹಾಗೆಯೇ ಬಡಾವಣೆಯ ಅಭಿವೃದ್ಧಿಗೆ ಎಲ್ಲರೂ ಸೇರಿ ಒಕ್ಕೊರಲ ಹೋರಾಟ ನಡೆಸಿದ ಫಲವಾಗಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಕಾಡಿದ ಮಳೆಗಾಲದ ಪ್ರವಾಹ ನಿಯಂತ್ರಿಸುವ ಸಲುವಾಗಿ 4 ಕೋಟಿ ವೆಚ್ಚದಲ್ಲಿ ಕಾವೇರಿ ನದಿಯಂಚಿನಲ್ಲಿ ತಡೆಗೋಡೆ ನಿರ್ಮಾಣ ವಾಗಿದೆ.
ಹಾಗೆಯೇ ಬಡಾವಣೆಯ ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಹಾಗೂ ಕುವೆಂಪು ಪುತ್ಥಳಿ ನಿರ್ಮಾಣ ಮಾಡುವ ಚಿಂತನೆ ಹೊಂದಲಾಗಿದೆ ಎಂದರು.
ವಾರ್ಷಿಕೋತ್ಸವದ ಅಂಗವಾಗಿ ಬಡಾವಣೆಯ ಕುಟುಂಬಗಳ ಮಕ್ಕಳಿಗೆ ಕಾಳು ಹೆರಕುವುದು, 50 ರಿಂದ 500 ಮೀಟರ್ ವರೆಗಿನ ಓಟದ ಸ್ಪರ್ಧೆ, ಮೆಮೋರಿ ಪರೀಕ್ಷೆ, ರಸಪ್ರಶ್ನೆ ನಡೆಯಿತು.
ಹಾಗೆಯೇ ಪುರುಷರು ಮತ್ತು ಮಹಿಳೆಯರಿಗೆ ಬಾಂಬ್ ಇನ್ ದ ಸಿಟಿ, ಡ್ರಂ ಗೆ ಬಾಲು ಹಾಕುವ ಸ್ಪರ್ಧೆ ನಡೆಯಿತು.
ಮಧ್ಯಾಹ್ನದ ಭೋಜನದ ನಂತರ ಮಕ್ಕಳು ಹಾಗೂ ನಿವಾಸಿಗಳಿಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಜೇತ ರಿಗೆ ನಗದು ಬಹುಮಾನ ನೀಡಲಾಯಿತು.
ಬಡಾವಣೆಯ ನಿವಾಸಿಗಳ ಪ್ರತಿಭಾವಂತ ಮಕ್ಕಳು ಹಾಗೂ ಸಾಧಕರನ್ನು ಗುರುತಿಸಲಾಯಿತು.
ಕಾರ್ಯಕ್ರಮದಲ್ಲಿ ಬಡಾವಣೆಯ ಕಾರ್ಯದರ್ಶಿ ಬೀನಾ ಅನಿಲ್ ಕುಮಾರ್, ಖಜಾಂಚಿ ಬಿ.ಎಂ.ರವೀಂದ್ರ, ಸಲಹೆಗಾರರಾದ ಕೆ.ಜಿ.ಚಂದ್ರಶೇಖರ್, ನಿರ್ದೇಶಕ ರಾದ ಸಿ.ಕೆ.ಹೇಮಂತ್, ಅಮರಾವತಿ, ಪ್ರಕಾಶ್ ಇದ್ದರು.
ಬುಟ್ಟಂಡ ಪಿ.ಶರಿ ಕಾರ್ಯಪ್ಪ ನಿರೂಪಿಸಿದರು.
ಚಂದ್ರಶೇಖರ್ ಸ್ವಾಗತಿಸಿದರು.
ಬಿ.ಎಂ.ರವೀಂದ್ರ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!