ಕುಶಾಲನಗರ, ಡಿ 28: ಧೈರ್ಯ ಮತ್ತು ವಿನಯ ಸಂಕೇತ ಮೌಲ್ಯಯುತ ಶಿಕ್ಷಣ. ಪೋಷಕರು ಮಕ್ಕಳಲ್ಲಿ ಸಂಸ್ಕಾರ ಬಿತ್ತಿ ಬೆಳೆಯುಬೇಕಿದೆ ಎಂದು ಮೀನುಗಾರಿಗೆ ಇಲಾಖೆ ಸಹಾಯಕಿ ನಿರ್ದೇಶಕಿ ಮಿಲನ ಭರತ್ ತಿಳಿಸಿದರು.
ಬೊಳ್ಳೂರಿನ ಸೆಪ್ಟೆಮ್ ಪ್ರೈಮರಿ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ಪೋಷಕರು ಮರೆಯದೆ ಮಕ್ಕಳಿಗೆ ಶಿಸ್ತು ಕಲಿಸಿ ದೊಡ್ಡ ಕನಸು ಕಾಣಲು, ಗುರಿ ಮುಟ್ಟಲು ಪ್ರೇರೇಪಿಸಬೇಕಿದೆ. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನು ಆಸ್ತಿಯಾಗಿಸಬೇಕಿದೆ ಎಂದು ಕರೆ ನೀಡಿದರು. ಮಕ್ಕಳು ಕೂಡ ಸದಾ ವಿನಯ ಮೈಗೂಡಿಸಿಕೊಳ್ಳುವಂತೆ ತಿಳಿಸಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿ.ಆರ್.ಪಿ.ವೈಶಾಲಿ ಮಾತನಾಡಿ, ಶಾಲೆ ಎಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ತಾಣ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರ ಕೂಡ ಪ್ರಮುಖವಾಗಿದೆ ಎಂದರು.
ಶಾಲೆಯ ಸಂಸ್ಥಾಪಕ ಜಿ.ಉಲ್ಲಾಸ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಗುಡ್ಡೆಹೊಸೂರು ಗ್ರಾಪಂ ಸದಸ್ಯ ಕುಡೆಕಲ್ಲು ನಿತ್ಯಾನಂದ, ಮುಖ್ಯ ಶಿಕ್ಷಕಿ ಪಿ.ಜಿ.ಶಾಂತಿ, ಟ್ರಸ್ಟಿ ಡಿ.ಯು.ರಚಿತ ಇದ್ದರು. ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Back to top button
error: Content is protected !!