ಕುಶಾಲನಗರ, ಜು 29: ಕುಶಾಲನಗರ ವಾಸವಿ ಯುವಜನ ಸಂಘದ ವತಿಯಿಂದ ಮೈಸೂರಿನ ನಾರಾಯಣ ಆಸ್ಪತ್ರೆ ತಜ್ಞ ವೈದ್ಯರ ಮೂಲಕ ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಉಚಿತ ಹೃದಯ ರೋಗ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಲಾಯಿತು. ಕರ್ನಾಟಕ ಆರ್ಯ ವೈಶ್ಯ ಮಹಾಸಭಾದ ಕಾರ್ಯಕಾರಿ ಮಂಡಳಿ ಸದಸ್ಯ ಬಿ.ಆರ್.ನಾಗೇಂದ್ರ ಪ್ರಸಾದ್ ಶಿಬಿರ ಉದ್ಘಾಟಿಸಿದರು. ಯುವಜನ ಸಂಘದ ಅಧ್ಯಕ್ಷ ಪ್ರವೀಣ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಹಾಸಭಾ ಕೊಡಗು ಜಿಲ್ಲಾ ಅಧ್ಯಕ್ ಬಿ.ಎಲ್.ಸತ್ಯ ನಾರಾಯಣ, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವತಿಯರ ಸಂಘದ ಕಾರ್ಯದರ್ಶಿ ಹೇಮ ಸುನಿಲ್, ಆಸ್ಪತ್ರೆ ವೈದ್ಯೆ ಗುಲ್ಜಾರ್, ಪುರಸಭಾ ಸದಸ್ಯ ಅಮೃತ್ ರಾಜ್ ಸೇರಿದಂತೆ ಯುವಜನ ಸಂಘದ ಪದಾಧಿಕಾರಿಗಳಾದ ವೈಶಾಖ್, ಅಂಜನ್, ಗೌತಮ್, ನಿಖಿಲ್, ರವಿಪ್ರಕಾಶ್ ಮತ್ತಿತರರು ಇದ್ದರು.
Back to top button
error: Content is protected !!