ಕಾರ್ಯಕ್ರಮ

ಜೆಡಿಎಸ್ ವಿರಾಜಪೇಟೆ ತಾಲ್ಲೂಕು ಸಮಿತಿ ವತಿಯಿಂದ ಕುಮಾರಸ್ವಾಮಿ ರವರ ಜನ್ಮದಿನಾಚರಣೆ

ಕುಶಾಲನಗರ, ಡಿ 16: ಮಾಜಿ ಮುಖ್ಯಮಂತ್ರಿಗಳು ಮಂಡ್ಯ ಸಂಸದರು ಹಾಗೂ ಕೇಂದ್ರ ಸಚಿವರಾಗಿರುವ ಎಚ್ ಡಿ ಕುಮಾರಸ್ವಾಮಿ ರವರ 66ನೇ ವರ್ಷದ ಜನ್ಮದಿನದಂದು ವಿರಾಜಪೇಟೆಯ ಅರ್ಜಿ ಗ್ರಾಮದ ಶಕ್ತಿ ವೃದ್ಧಾಶ್ರಮದಲ್ಲಿ ಉಪಸ್ಥಿತರಿದ್ದ ವೃದ್ಧರೊಂದಿಗೆ ಊಟ ಉಪಚಾರದೊಂದಿಗೆ ಮಂಜುನಾಥ್ ಅವರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು . ತಾಲೂಕು ಅಧ್ಯಕ್ಷರಾದ ಪಿ ಎ ಮಂಜುನಾಥ್, ತಾಲೂಕು ಕಾರ್ಯದರ್ಶಿಯಾದ ಹರ್ಷ ಟಿ ಆರ್. ತಾಲೂಕು ಉಪಾಧ್ಯಕ್ಷರಾದ ಕೆ ಎಸ್ ರಜಾಕ್, ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಮಜೀದ್ ಚೊಕಂಡಹಳ್ಳಿ, ಯುವ ಘಟಕದ ಅಧ್ಯಕ್ಷ ಸೈಫುುದ್ದೀನ್, ಎಸ್ ಸಿ ಎಸ್ ಟಿ ಘಟಕದ ಅಮ್ಮತ್ತಿ ಜಯಮ್ಮ ಮುಖಂಡರಾದ ನೂರ್ ಅಹಮ್ಮದ್, ಸಮಾಜ ಸೇವಕರಾದ ಟಿ ವಿ ಸಾಜು ಮೋನ್, ಶಕ್ತಿ ವೃದ್ಧಾಶ್ರಮದ ಸಹಾಯಕ ಹನುಮಂತು ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ಆಯೋಜಿಸಿದ ವಿರಾಜಪೇಟೆ ತಾಲೂಕು ಜೆಡಿಎಸ್ ಪಕ್ಷದ ಎಲ್ಲಾ ಮುಖಂಡರುಗಳಿಗೂ ಅಭಿನಂದನೆ ಹಾಗೂ ಧನ್ಯವಾದಗಳು ಸಲ್ಲಿಸುತ್ತಿದ್ದೇವೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!