ಕಾರ್ಯಕ್ರಮ

ಕುಶಾಲನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಭ್ಬಾಣ ದಿನ ಆಚರಣೆ

ಕುಶಾಲನಗರ, ಡಿ 06: ತಾಲೂಕು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕುಶಾಲನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿಭ್ಬಾಣ ದಿನ ಆಚರಿಸಲಾಯಿತು.

ಕಾರ್ಯಕ್ರಮಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ‌ ನಮನ‌ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ
ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ,
ಜ್ಞಾನದ ವ್ಯಕ್ತಿ ಅಂಬೇಡ್ಕರ್ ಇತರಿಗಾಗಿ ಬದುಕಿದವರು. ಸಂಪೂರ್ಣವಾಗಿ ಇತರರಿಗಾಗಿ ಬದುಕಿ ಚರಿತ್ರೆ ಸೃಷ್ಠಿಸಿದವರ ಪೈಕಿ ಪ್ರಮುಖ ಸ್ಥಾನದಲ್ಲಿ ಇದ್ದಾರೆ. ಸಮಾನತೆಗಾಗಿ ಬದುಕನ್ನು ಮುಡಿಪಾಗಿರಿಸಿ ಎಲ್ಲರಿಗಾಗಿ ಸಂವಿಧಾನ‌ ರಚಿಸಿಕೊಟ್ಟರು. ಸಂವಿಧಾನ ರಚನೆ ಕಾಲಘಟ್ಟದಲ್ಲಿ ಅಂಬೇಡ್ಕರ್ ಇಲ್ಲದಿದ್ದರೆ ಇಂದಿನ‌ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಹಬಾಳ್ವೆ, ಸಮಾನತೆ, ಸಾಮರಸ್ಯ, ಸಮೃದ್ದತೆಯನ್ನು ಸಂಕೇತವಾದ ಸಂವಿಧಾನ ರಚನೆ ಅತ್ಯಂತ ಶ್ರೇಷ್ಠ ಕಾರ್ಯ ಎಂದು ಬಣ್ಣಿಸಿದರು.
ವಿವಿಧ ಸಂಘಸಂಸ್ಥೆಗಳ ಪ್ರಮುಖರಾದ ಕೆ.ಬಿ.ರಾಜು, ದಾಮೋದರ್, ನಂಜುಂಡಸ್ವಾಮಿ, ಪುರಸಭೆ ಮಾಜಿ ಸದಸ್ಯ ವಿ.ಜೆ.ನವೀನ್ ಪೊಲೀಸ್ ಅಧಿಕಾರಿ ಗೀತಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದರಾಜು, ರವಿ, ಅಂಗನವಾಡಿ ಶಿಕ್ಷಕಿಯರು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!