ಕುಶಾಲನಗರ, ನ 30: ಡಿಸೆಂಬರ್ ಎರಡರಂದು ಹನುಮ ಜಯಂತಿ ಅಂಗವಾಗಿ ಹನುಮ ಜಯಂತಿ ದಶಮಂಟಪಗಳ ಸಮಿತಿ ಆಶ್ರಯದಲ್ಲಿ ಅದ್ದೂರಿ ಹನುಮಂತೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಂಟಪಗಳ ಸಮಿತಿ ಅಧ್ಯಕ್ಷರಾದ ಎಂ ಡಿ ಕೃಷ್ಣಪ್ಪ ತಿಳಿಸಿದ್ದಾರೆ.
ಅವರು ಕುಶಾಲನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅಂದು ಸಂಜೆ ರಥ ಬೀದಿಯ ಆಂಜನೇಯ ಉತ್ಸವ ಸಮಿತಿ ಸೇರಿದಂತೆ ಒಟ್ಟು ಎಂಟು ಮಂಟಪಗಳು ಮೆರವಣಿಗೆ ಮೂಲಕ ತೆರಳಲಿವೆ.
ಅವುಗಳಲ್ಲಿ 7 ಮಂಟಪಗಳು ತಮ್ಮ ಮಂಟಪಗಳ ಪ್ರದರ್ಶನ ನೀಡಲಿವೆ ಎಂದು ಮಾಹಿತಿ ನೀಡಿದರು.
ರಾತ್ರಿ ಎಂಟು ಗಂಟೆಗೆ ಗಣಪತಿ ದೇವಾಲಯ ಮುಂಭಾಗ ಕುಶಾಲನಗರ ಎಚ್ಆರ್ಪಿ ಕಾಲೋನಿಯ ಅಂಜನಿಪುತ್ರ ಜಯಂತೋತ್ಸವ ಆಚರಣೆ ಮಂಟಪ ರಾತ್ರಿ 8:30 ಕ್ಕೆ ಹಾರಂಗಿ ಭಾಗದಿಂದ ಬರುವ ವೀರ ಹನುಮಾನ್ ಸೇವಾ ಸಮಿತಿ ಮಂಟಪ ನಂತರ 8:45ಕ್ಕೆ ಗೋಪಾಲ ಸರ್ಕಲ್ ಬಳಿಯಿಂದ ಟೀಮ್ ಕೇಸರಿ ಅವರ ನೇತೃತ್ವದ ಮಂಟಪ ಬಂದು ಗಣಪತಿ ದೇವಾಲಯ ಬಳಿ ಪ್ರದರ್ಶನ ನೀಡಲಿದೆ..
ನಂತರ ಮಾದಾಪಟ್ಟಣದ ಶ್ರೀರಾಮ ದೂತ ಜಯಂತಿ ಆಚರಣೆ ಸಮಿತಿಯ ಮಂಟಪ 9 ಗಂಟೆಗೆ, ಇಂದಿರಾ ಬಡಾವಣೆಯಿಂದ ಹೊರಡಲಿರುವ ಟೀಂ ಮಹಾ ವೀರ ಹನುಮಾನ್ ಸೇವಾ ಸಮಿತಿ ಮಂಟಪ ರಾತ್ರಿ 9:30ಕ್ಕೆ ತಮ್ಮ ಪ್ರದರ್ಶನ ನೀಡಲಿದೆ ನಂತರ ಕೂಡಿಗೆ,ಕೂಡು ಮಂಗಳೂರಿನಿಂದ ಆಗಮಿಸುವ ಹನುಮ ಸೇವಾ ಸಮಿತಿಯ ಮಂಟಪ ರಾತ್ರಿ 10.30 ಹಾಗೂ ಗುಡ್ಡೆ ಹೊಸೂರು ಬಳಿಯಿಂದ ಬರುವ ವೀರಾಂಜನೇಯ ಸೇವಾ ಸಮಿತಿ ಮಂಟಪ ರಾತ್ರಿ 11:30 ಗಂಟೆಗೆ ಪ್ರದರ್ಶನ ನೀಡಲಿದೆ ಎಂದು ಮಾಹಿತಿ ಒದಗಿಸಿದರು.
ಶೋಭಾ ಯಾತ್ರೆಯ ಯಶಸ್ವಿಗಾಗಿ ಈಗಾಗಲೇ ಕ್ಷೇತ್ರ ಶಾಸಕರಾದ ಡಾ ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ಮಂಟಪ ಸಮಿತಿಗಳು ಹಲವು ಬಾರಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ.
ಶಾಂತಿಯುತವಾಗಿ ಹನುಮ ಭಕ್ತರು ಪಾಲ್ಗೊಂಡು ಶೋಭಾ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು. ಪ್ರದರ್ಶನ ನೀಡುವ ಮಂಟಪಗಳಿಗೆ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನಗಳು ಟ್ರೋಫಿ ಹಾಗೂ ಪಾಲ್ಗೊಳ್ಳುವ ಎಲ್ಲಾ ಮಂಟಪಗಳಿಗೆ ಸಮಾಧಾನಕರ ಬಹುಮಾನ, ಟ್ರೋಫಿ ನೀಡಲಾಗುತ್ತದೆ ಎಂದರು.
ಈ ಸಂದರ್ಭ ಮಂಟಪ ಸಮಿತಿಯ ಉಪಾಧ್ಯಕ್ಷರಾದ ಟಿ ವಿ ಕಿಶೋರ್ ಪ್ರಧಾನ ಕಾರ್ಯದರ್ಶಿ ಪಿ ಆರ್ ರಾಮನಾಥನ್ ಖಜಾಂಚಿ ಡಿ ವಿ ಗಿರೀಶ್ ಸಹ ಕಾರ್ಯದರ್ಶಿ ಸಿ ಎನ್ ಸುನಿಲ್ ಮತ್ತು ಕೆ ಎನ್ ದೇವರಾಜ್ ಇದ್ದರು.
Back to top button
error: Content is protected !!