ಕಾರ್ಯಕ್ರಮ

ಕನ್ನಡಪರ ಸಂಘಟನೆಗಳ ಸಮಾಗಮ: ಕೂಡಿಗೆಯಲ್ಲಿ ಕನ್ನಡ ರಾಜ್ಯೋತ್ಸವ

ಕುಶಾಲನಗರ, ನ 21: ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಕೂಡಿಗೆ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಶಿವರಾಮೇಗೌಡ ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಬಿ.ಎ.ದಿನೇಶ್ ಧ್ವಜಾರೋಹಣ ನೆರವೇರಿಸಿದರು.

ಪ್ರವೀಣ್ ಶೆಟ್ಟಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಅಧ್ಯಕ್ಷ ಆಸಿಫ್, ಜಿಲ್ಲಾ ಸಂಚಾಲಕ ಗೋವಿಂದ ರಾಜ್ ದಾಸ್, ಸಾಹಿತಿ ಭಾರಧ್ವಜ್ ಕೆ ಆನಂದತೀರ್ಥ, ಕಿರುತೆರೆ ನಟಿ ಮೀನಾಕ್ಷಿ, ಕೇಂದ್ರ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷ ಹೆಚ್.ಎಂ.ರಘು, ನಿವೃತ್ತ ಶಿಕ್ಷಕ ಉ.ರಾ.ನಾಗೇಶ್, ಮೊರಾರ್ಜಿ ವಸತಿ ಶಾಲಾ ಮುಖ್ಯ ಶಿಕ್ಷಕಿ ಭಾರತಿ ಸೇರಿದಂತೆ ಕರವೇ ಪದಾಧಿಕಾರಿಗಳು, ಸ್ಥಳೀಯ ಉದ್ಯಮಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!