ಕುಶಾಲನಗರ ನ 16: ಗೊಂದಿಬಸವನಹಳ್ಳಿ ಗ್ರಾಮದ ನಂ 38184ನೇ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಸಾಲಿನ ನಿರ್ದೇಶಕರ ಅವಿರೋಧ ಆಯ್ಕೆ ನಡೆಯಿತು.
ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ನ.22 ಕ್ಕೆ ಚುನಾವಣೆ ನಿಗದಿಯಾಗಿತ್ತು.
13 ಮಂದಿ ನಿರ್ದೇಶಕರ ಸ್ಥಾನಕ್ಕೆ ಕೇವಲ 12 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದವು.
ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ ನಾಮ ಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಉಳಿದ 12 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿರುವ ಬಗ್ಗೆ ಚುನಾವಣಾಧಿಕಾರಿ ಉಪ ನಿಬಂಧಕರ ಕಛೇರಿಯ ಆಶಾ ಘೋಷಣೆ ಮಾಡಿದರು.
ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಡೇರಿ ಬೆಳೆದು ಬಂದಿದೆ. ಎಲ್ಲರ ಸಹಕಾರದಿಂದ ಸಂಘ ಅಭಿವೃದ್ದಿ ಪಥದತ್ತ ಸಾಗುತ್ತಿದ್ದು ಮುಂದೆಯೂ ಕೂಡ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ನೂತನ ನಿರ್ದೇಶಕರಾದ ಪ್ರಸನ್ನ ಹಾಗೂ ಮಾಜಿ ಅಧ್ಯಕ್ಷ ಮಧುಕುಮಾರ್ ತಿಳಿಸಿದರು.
ನೂತನ ಸಾಲಿನ ನಿರ್ದೇಶಕರಾಗಿ ಮಧುಕುಮಾರ, ಶಿವಕುಮಾರ್, ಸೋಮಣ್ಣ, ಪ್ರಸನ್ನ, ದಿವಾಕರ, ಕಾಮಾಕ್ಷಿ, ಉಷಾ, ಪ್ರದೀಪ, ನವೀನ, ಲಕ್ಷ್ಮಣನಾಯಕ, ರಾಮಣ್ಣ, ತಿಮ್ಮಪ್ಪ ಆಯ್ಕೆಯಾದರು.
ಇದೇ ಸಂದರ್ಭ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭ ಮಹಮ್ಮದ್ ಇಬ್ರಾಹಿಂ ಟಿಲ್ಲು, ಗಿರೀಶ್ ಎಂ.ಪಿ, ದಿಲೀಪ್ ಕುಮಾರ್, ಪುನಿತ್, ಸತೀಶ್ ಮತ್ತಿತರರು ಇದ್ದರು.
Back to top button
error: Content is protected !!