ಕುಶಾಲನಗರ, ಆ 15: ದಂಡಿನಪೇಟೆಯ ಮಸೀದಿ ಎ ನೂರ್ ವತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಮಸೀದಿ ಆಡಳಿತ ಮಂಡಳಿ ವತಿಯಿಂದ ಮಸೀದಿ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಾಯಿತು.
ಮಸೀದಿ ಸಮಿತಿ ಅಧ್ಯಕ್ಷರಾದ ಶಬ್ಬೀರ್ ಪಾಷಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ನಬಿ ಅಹಮ್ಮದ್ ಮತ್ತು ಹೊನ್ನಪ್ಪ ಅವರನ್ನಹ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಹಮ್ಮದ್ ಯೂಸಫ್ ಮೌಲಾನ ಅವರು ಮುಖ್ಯ ಭಾಷಣ ಮಾಡಿದರು. ಕುಶಾಲನಗರ ಪಪಂ ಉಪಾಧ್ಯಕ್ಷೆ ಸುರಯ್ಯಭಾನು, ಪ್ರಮುಖರಾದ ಮಹಮ್ಮದ್ ರಫಿ, ತಾಹಿರ್ ಹುಸೇನ್, ಮಹಮ್ಮದ್ ಇರ್ಫಾನ್, ಹಾಫಿಜ್ ರೆಹೆಮಾನ್, ಶಬೀರ್ ಸೇರಿದಂತೆ ಮಸೀದಿ ಆಡಳಿತ ಮಂಡಳಿ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸ್ಥಳೀಯ ನಿವಾಸಿಗಳು ಇದ್ದರು.
Back to top button
error: Content is protected !!