ಕುಶಾಲನಗರ, ನ 05: ಮಾದಪಟ್ಟಣ ಗ್ರಾಮದ 2.54 ಎಕರೆ ವಿಸ್ತೀರ್ಣದ ಕುಳುವಾಡಿಕಟ್ಟೆ ಕೆರೆಯ ಒತ್ತುವರಿಯನ್ನು, ಈ ದಿನ ಕಂದಾಯ ಅಧಿಕಾರಿಗಳು ಹಾಗೂ ಸರ್ವೆ ಇಲಾಖಾಧಿಕಾರಿಗಳೊಂದಿಗೆ ಜಂಟಿಯಾಗಿ ಹದ್ದುಬಸ್ತು ಗುರುತಿಸಿ ಗುಡ್ಡೆ ಹೊಸೂರು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭ ಕುಶಾಲನಗರ ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ ರವರು ಉಪಸ್ಥಿತರಿದ್ದು ಗ್ರಾಮ ಪಂಚಾಯಿತಿಗೆ ಕೆರೆಯನ್ನು ಹತ್ತಾಂತರಿಸಿದರು. ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸೌಮ್ಯ ಉಪಾಧ್ಯಕ್ಷ ಪ್ರವೀಣ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ ಎಂ ಆರ್, ಆಡಳಿತ ಮಂಡಳಿ ಸದಸ್ಯರಾದ ಶಿವಪ್ಪ ಗಂಗಮ್ಮ ಲಕ್ಷ್ಮಣ್ ರಮೇಶ್ ಕಂದಾಯಾಧಿಕಾರಿ ಸಂತೋಷ್ ಹಾಗೂ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Back to top button
error: Content is protected !!