ಕುಶಾಲನಗರ, ಅ 03: ಕರ್ನಾಟಕ ಚಾಲಕರ ಒಕ್ಕೂಟದ ರಾಜ್ಯ ಸಂಚಾಲಕ ಕೃಷ್ಣರಾಜು ಅರಸು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ್ರು ಕುಶಾಲನಗರಕ್ಕೆ ಭೇಟಿ ನೀಡಿದ್ದರು.
ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯ ಚಾಲಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಒಕ್ಕೂಟದ ಸಂಘಟನೆ ಬಲವರ್ಧನೆ ಕುರಿತಾದ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ರಾಜ್ಯ ಸಂಚಾಲಕ ಕೃಷ್ಣರಾಜು ಅರಸು, ಕೆಲವು ಸಂಘಟನೆಗಳು ಸದಸ್ಯರಿಂದ ಹಣ ಕಿತ್ತು ತಿನ್ನುವ ಪರಿಪಾಠ ಬೆಳೆಸಿಕೊಂಡಿದೆ. ಕರ್ನಾಟಕ ಚಾಲಕರ ಒಕ್ಕೂಟ ಸ್ವಂತ ಖರ್ಚಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸದಸ್ಯ ಬಲವರ್ಧನೆಗೆ ಅವರಿಗೆ ದಕ್ಕಬೇಕಾದ ಸೌಲಭ್ಯಗಳು, ನ್ಯಾಯ ಒದಗಿಸಲು ಹೋರಾಟ ಹಮ್ಮಿಕೊಂಡಿದೆ. ಒಕ್ಕೂಟ ರಾಜ್ಯಾಧ್ಯಕ್ಷ ಅವರ ನೇತೃತ್ವದ ಒಕ್ಕೂಟ ಅನ್ಯಾಯದ ವಿರುದ್ದ ದನಿ ಎತ್ತಲು, ಹೋರಾಡಲು ಶಕ್ತಿ ಹಾಗೂ ಧೈರ್ಯ ತುಂಬಿದ್ದಾರೆ. ಇಂತಹ ಸಂಘಟನೆಗಳ ಸದಸ್ಯರಾಗುವ ಮೂಲಕ ಸದೃಢರಾಗಲು ಕರೆ ನೀಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ್ರು ಮಾತನಾಡಿ, ಅತಿ ಹೆಚ್ಚು ತೆರಿಗೆ ಕಟ್ಟುವ ವರ್ಗ ಚಾಲಕ ವರ್ಗ. ನಮ್ಮ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಸರಕಾರಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿನಿತ್ಯ ತೆರಿಗೆ ಪಾವತಿಸುತ್ತಿದ್ದೇವೆ. ಹುಟ್ಟಿದಾಗಲೂ, ಸತ್ತಾಗಲೂ ಚಾಲಕರ ಅವಶ್ಯಕತೆ ಅವಶ್ಯವಿದೆ. ಆದರೂ ಚಾಲಕರಿಗೆ ಸಿಗಬೇಕಾದ ಮಾನ್ಯತೆ, ಗೌರವ ಲಭಿಸುತ್ತಿಲ್ಲ ಎಂಬುದು ವಿಷಾದಕರ ಸಂಗತಿ ಎಂದರು. ಕರ್ನಾಟಕ ಚಾಲಕರ ಒಕ್ಕೂಟದ ಸದಸ್ಯರುಗಳಿಗೆ ಸಂಘಟನೆಯಿಂದ ಲಾಭವೇ ಹೆಚ್ಚು. ನಮ್ಮ 30 ಬೇಡಿಕೆಗಳಿಗೆ ಸ್ಪಂದಿಸಿದ ಸಚಿವ ರಾಮಲಿಂಗರೆಡ್ಡಿ ಅವರು ಈಗಾಗಲೆ ಕೆಲವು ಬೇಡಿಕೆಗಳನ್ನು ಈಡೇರಿಸಿದ್ದಾರೆ. ಕೊಡಗಿನ ಪ್ರವಾಸೋದ್ಯಮಕ್ಕೆ ಚಾಲಕರ ಕೊಡುಗೆ ಅಪಾರವಿದೆ. ಆದರೆ ಅದಕ್ಕೆ ಪ್ರತಿಫಲವಾಗಿ ಬದುಕಿದ್ದಾಗ ಚಾಲಕರಿಗೆ ಯಾವುದೇ ಸೌಲಭ್ಯ ದೊರಕುತ್ತಿಲ್ಲ. ನಮ್ಮ ಹಕ್ಕುಗಳು, ಜವಾಬ್ದಾರಿಗಳು, ಅಧಿಕಾರದ ಬಗ್ಗೆ ಕನಿಷ್ಠ ಮಾಹಿತಿ ಹೊಂದುವ ಅಗತ್ಯವಿದೆ. ಸಂಚಾರಿ ನಿಯಮಗಳನ್ನು ಪಾಲಿಸಿ, ಕಾನೂನು ಅರಿತುಕೊಂಡಲ್ಲಿ ನಮ್ಮ ಮೇಲಿನ ದೌರ್ಜನ್ಯಗಳನ್ನು ಖಂಡಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಸಯ್ಯದ್ ಮುಜೀಬ್, ಉಪಾಧ್ಯಕ್ಷ ಚಂದ್ರು, ಪ್ರಧಾನ ಕಾರ್ಯದರ್ಶಿ ಸಯ್ಯದ್ ರಿಯಾಜ್, ಕುಶಾಲನಗರ ತಾಲೂಕು ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮನುಕುಮಾರ್ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಇದ್ದರು.
Back to top button
error: Content is protected !!