ಕುಶಾಲನಗರ, ಅ 07: ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷರಾದ ಭಾಸ್ಕರ್ ನಾಯಕರವರ ಅಧ್ಯಕ್ಷತೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು ದಿನದ ಮಹತ್ವದ ಕುರಿತು ಮಾತನಾಡಿ ಭಾಸ್ಕರ ನಾಯಕರು ವಾಲ್ಮೀಕಿ ಮಹರ್ಷಿ ರಚಿಸಿದ ರಾಮಾಯಣ ಗ್ರಂಥ ಜಗತ್ತಿನ ಶ್ರೇಷ್ಠ 10 ಧಾರ್ಮಿಕ ಗ್ರಂಥಗಳಲ್ಲಿ ಅತ್ಯಂತ ಮೇಲ್ಪಂತಿಯಾಗಿರುವಂಥದ್ದು ವಾಲ್ಮೀಕಿ ರಾಮಾಯಣ, ವಾಲ್ಮೀಕಿ ಅಂದರೆ ಪರಿವರ್ತನೆ, ವಾಲ್ಮೀಕಿಯ ರಾಮಾಯಣದಲ್ಲಿ ತಂದೆ ಮಗ ಹೇಗಿರಬೇಕು ಎಂಬುದನ್ನು ದಸರಾದ ರಾಮನಿಂದ ತೋರಿಸಿದ್ದಾರೆ, ಅಣ್ಣ ತಮ್ಮಂದಿರು ಹೇಗಿರಬೇಕೆಂದು ರಾಮ ಲಕ್ಷ್ಮಣರಿಂದ ತೋರಿಸಿದ್ದಾರೆ, ದಂಪತಿಗಳು ಹೇಗಿರಬೇಕೆಂದು ರಾಮ ಸೀತೆಯಿಂದ ತೋರಿಸಿದ್ದಾರೆ ಎಂದು ವಾಲ್ಮೀಕಿ ರಾಮಾಯಣ
ಮಹತ್ವವನ್ನು ವಿವರಿಸಿದರು. ಈ ಸಂದರ್ಭ ಪಂಚಾಯತಿ ಅಭಿವೃದ್ಧಿ ಅಧಿಕಾರಿಯದಂತಹ ಸಂತೋಷ ರವರು ಮತ್ತು ಪಂಚಾಯಿತಿ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು
Back to top button
error: Content is protected !!